ಭದ್ರತಾ ಕೊಠಡಿ ಸೇರಿದ ಮತಪೆಟ್ಟಿಗೆ ಕಾವಲಿಗೆ ಮೂರು ಹಂತಗಳ ಭದ್ರತಾ ವ್ಯವಸ್ಥೆ

ಕೊಟ್ಟೂರು ಡಿ 28 :ತಾಲೂಕಿನ 13 ಗ್ರಾಮ ಪಂಚಾಯಿತಿಯ ಸದಸ್ಯರ ಆಯ್ಕೆಗಾಗಿ 81 ಮತಗಟ್ಟೆಗಳಲ್ಲಿ ಭಾನುವಾರ ಮತದಾನ ಪೂರ್ಣಗೊಂಡ ಬಳಿಕ ಎಲ್ಲ ಮತಪೆಟ್ಟಿಗೆಗಳನ್ನು ಪಟ್ಟಣದ ಸರ್ಕಾರಿ ಪದವಿಪೂರ್ವಕಾಲೇಜಿನ ಮತ ಎಣಿಕೆ ಕೇಂದ್ರದ ಭದ್ರತಾ ಕೊಠಡಿಗಳಲ್ಲಿ ಭಾರಿ ಭದ್ರತೆಯಲ್ಲಿ ಇರಿಸಲಾಗಿದೆ. ಮತಪೆಟ್ಟಿಗೆ ಇರಿಸಿರುವ ಭದ್ರತಾ ಕೊಠಡಿಗೆ ಪೊಲೀಸರು ಬಿಗಿ ಭದ್ರತೆ ಒದಗಿಸುತ್ತಿದ್ದಾರೆ. ಡಿ.30
ಮತ ಎಣಿಕೆ ನಡೆಯಲಿದ್ದು, ಅಲ್ಲಿಯವರೆಗೂ ಮತಪೆಟ್ಟಿಗೆಗಳು ಪೊಲೀಸ್‌ ಸರ್ಪಗಾವಲಿನಲ್ಲಿ ಇರಲಿದೆ ಎಎಸ್.ಐಗಂಗಧರ,ವಸಂತರಾವ್ ಹಾಗೂ ಸಿಬ್ಬಂದಿ ಇದ್ದರು.