ಭದ್ರತಾ ಕೊಠಡಿಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳು 

ಹರಿಹರ. ಏ. 5 ; ನಗರದ  ಹರಪನಹಳ್ಳಿ ರಸ್ತೆಯಲ್ಲಿರುವ ಸೆಂಟ್ ಮೇರಿಸ್ ಕಾನ್ವೆಂಟ್ ಶಾಲೆಯಲ್ಲಿ ವಿದ್ಯುನ್ಮಾನಮತಯಂತ್ರಗಳನ್ನು ಇಡಲಾಗಿರುವ ಭದ್ರತಾ ಕೊಠಡಿಗೆ  ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಹರಿಹರ 105 ವಿಧಾನಸಭಾ ಕ್ಷೇತ್ರ ಚುನಾವಣಾ ಅಧಿಕಾರಿ ಉದಯ ವಿ ಕುಂಬಾರ್ ತಿಳಿಸಿದರು.ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಸಂಬಂಧಿಸಿದ ಇವಿಎಂಎಸ್ ಮತ್ತು ವಿ ವಿ ಪಿ ಎ ಟಿ ಗಳ ಪ್ರಥಮ ರ‍್ಯಾಂಡ್  ಮೈ ಸ್ಟೇಶನ್  105 ಹರಿಹರ ವಿಧಾನಸಭಾ ಕ್ಷೇತ್ರಕ್ಕೆ ಹಂಚಿಕೆ ಮಾಡಲಾದ  ವಿದ್ಯುನ್ಮಾನ ಮತ ಯಂತ್ರಗಳು ಹರಿಹರದ ಸೆಂಟ್ ಮೇರಿಸ್ ಕಾನ್ವೆಂಟ್ ಸ್ಕೂಲಿನಲ್ಲಿ ಸ್ಥಾಪಿಸಲಾಗಿರುವ ತಾತ್ಕಾಲಿಕ ಭದ್ರತಾ ಕೊಠಡಿಯಲ್ಲಿ  ಸುರಕ್ಷಿತವಾಗಿರಿಸಿ ಪೋಲಿಸ್ ಇಲಾಖೆಯಿಂದ ಭದ್ರತೆ ಒದಗಿಸಲಾಗಿದ್ದು  ಭದ್ರತಾ ಕೊಠಡಿಗಳ ಹೊರಭಾಗದಲ್ಲಿ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಭದ್ರತಾ ಕೊಠಡಿ ಸುರಕ್ಷತಾ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.ತಹಶೀಲ್ದಾರ್ ಪೃಥ್ವಿ ಸಾನಿಕಂ. ನಗರಸಭೆ ಆಯುಕ್ತ ಬಸವರಾಜ್ ಐಗೂರ್. ನಗರ ಠಾಣೆ ಪಿಎಸ್ಐ ಕಂದಾಯ ಚುನಾವಣೆ ಇಲಾಖೆಯ ನಗರ ಸಭೆ ಪೊಲೀಸ್ ಇಲಾಖೆ   ಅಧಿಕಾರಿ ಸಿಬ್ಬಂದಿ ವರ್ಗದವರು ಇದ್ದರು