ಭತ್ತ ಖರೀದಿ ಕೇಂದ್ರ ಪ್ರಾರಂಭ

ಸಿರುಗುಪ್ಪ, ಏ.27: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ಸಭಾಂಗಣದಲ್ಲಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಭತ್ತ ಖರೀದಿ ಕೇಂದ್ರ ಕುರಿತು ಪತ್ರಿಕಾ ಗೋಷ್ಠಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಹಿಂಗಾರು ಹಂಗಾಮಿನಲ್ಲಿ ಭತ್ತ ನಾಟಿ ಮಾಡಿದ್ದು ಇಂದು ಭತ್ತವು ತಡವಾಗಿ ಕಟವಾವು ಆಗುತ್ತಿದೆ, ಕೋವಿಡ್‍ನಿಂದಾಗಿ ರೈತರಿಗೆ ಯಾವುದೇ ತೋಂದರೆ ಆಗಬಾರದು ಎಂದು ಕೇಂದ್ರ ಮತ್ತು ಸರ್ಕಾರವು ರೈತರ ಅನುಕೂಲಕ್ಕಾಗಿ ಭತ್ತ ಖರೀದಿ ಕೇಂದ್ರ ಪ್ರಾರಂಭಿಸಲಾಗಿದ್ದು, ಇನ್ನೂ ಕಟಾವು ನಡೆಸುತ್ತಿರುವ ರೈತರು ಭತ್ತ ಖರೀದಿ ಕೇಂದ್ರದಲ್ಲಿ ನೊಂದಾಯಿಸಿಕೊಂಡು ಸರ್ಕಾರದ ಬೆಂಬಲ ಬೆಲೆಗೆ ಭತ್ತವನ್ನು ಮಾರಾಟ ಮಾಡಿಕೊಳ್ಳಬಹುದು.
ಈ ಹಿಂದೆ ಜಿಲ್ಲಾಧಿಕಾರಿಗಳೊಂದಿಗೆ ಏಪ್ರೀಲ್ ಪ್ರಾರಂಭದಲ್ಲಿ ಭತ್ತ ಖರೀದಿ ಕೇಂದ್ರವನ್ನು ಪ್ರಾರಂಭಿಸುವಂತೆ ಮಾತುಕತೆ ಮೂಲಕ ಮನವಿ ಮಾಡಿಕೊಂಡಿದ್ದು, ಇಂದು ತಡವಾಗಿ ಭತ್ತ ಖರೀದಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ, ಮುಂಗಾರು ಹಂಗಾಮಿನಲ್ಲಿ ಭತ್ತಕ್ಕೆ ಕೊಳೆ ರೋಗ, ನೋಣ ರೋಗ ಬಾಧೆಯಿಂದ ರೈತರು ತಮ್ಮ ಭತ್ತದ ಇಳುವರಿ ಕಡಿಮೆಯಾಗಿರುವುದರಿಂದ ಹಿಂಗಾರು ಭತ್ತ ನಾಟಿಯು ಶೇ.100ರಲ್ಲಿ 50ರಷ್ಟು ರೈತರು ಭತ್ತವನ್ನು ನಾಟಿ ಮಾಡಿರುವುದಿಲ್ಲ, ಇನ್ನೂಳಿದ 50ರಷ್ಟು ರೈತರು ಭತ್ತವನ್ನು ತಡವಾಗಿ ನಾಟಿ ಮಾಡಿರುವುದರಿಂದ ಕಟಾವು ಕಡವಾಗಿ ಬರುತ್ತಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಭತ್ತಕ್ಕೆ 1400ರಿಂದ 1500ರವರಿಗೆ ಬೆಲೆ ಸಿಗುತ್ತಿದ್ದು, ಸರ್ಕಾರಿ ಭತ್ತದ ಖರೀದಿ ಕೇಂದ್ರದಲ್ಲಿ ಉತ್ತಮ ಬೆಂಬಲ ಬೆಲೆ 1800ರವರಿಗೆ ಸಿಗುವ ಸಾಧ್ಯತೆ ಇದೆ, ಆದ್ದರಿಂದ ರೈತರು ತಮ್ಮ ಭತ್ತವನ್ನು ಭತ್ತ ಖರೀದಿ ಕೇಂದ್ರಗಳಲ್ಲಿ ಮಾರಟ ಮಾಡಿ ಉತ್ತಮ ಬೆಲೆಯನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಕೋವಿಡ್ ಎರಡನೇ ಅಲೆಯಿಂದ ತಾಲೂಕಿನ ಯಾವುದೇ ರೈತರಿಗೆ ತೊಂದರೆಯಾಗದಂತೆ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ತರಕಾರಿ ಮಾರುಕಟ್ಟೆಯನ್ನು ಎರಡು ವಿಭಾಗವಾಗಿ ವಿಸ್ತಾರಿಸಲಾಗಿದೆ, ದಿನ ನಿತ್ಯ ತರಕಾರಿಯನ್ನು ತಾಲೂಕು ಕ್ರಿಡಾಂಗಣದಲ್ಲಿ 10ಅಡಿ ಅಂತರದಲ್ಲಿ ಮೂರು ಸಾಲುಗಳಲ್ಲಿ ವ್ಯಾಪಾರವನ್ನು ಮಾಡುವಂತೆ ನಗರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ, ಸವಾಲ್ ಹಾಕುವ ಮಾರುಕಟ್ಟೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದ್ದು ಇದ್ದಕ್ಕೆ ವ್ಯಾಪಾರಿಗಳು ಸ್ಪಂದಿಸಬೇಕು, ಕೋವಿಡ್ ಎರಡನೇ ಅಲೆಯು ವೇಗವಾಗಿ ಹರಡುವುದನ್ನು ನಿಯಂತ್ರಿಸಲು ದಟ್ಟನೆಯ ಜನ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಎ.ಪಿ.ಎಂ.ಸಿ. ಅಧ್ಯಕ್ಷ ಹಾಗಲೂರು ಮಲ್ಲನಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಆರ್.ಸಿ.ಪೊಂಪನಗೌಡ, ಆಹಾರ ಇಲಾಖೆಯ ಅಧಿಕಾರಿ ಮಹೇಶ, ಎ.ಪಿ.ಎಂ.ಸಿ ಆಡಳಿತ ಸಹಾಯಕ ಕಾರ್ಯರ್ನಿಹಕ ಜೋಷಿ, ಮುಖಂಡರಾದ ವೀರೇಶ, ಶಂಕ್ರಪ್ಪ ಇದ್ದರು.