ಭತ್ತ ಖರೀದಿ ಕೇಂದ್ರ-ನೀರಾವರಿ ಸಲಹ ಸಮಿತಿ ಸಭೆಗೆ ಮನವಿ

ರಾಯಚೂರು ನ ೧೦:- ಎನ್.ಆರ್.ಬಿ.ಸಿ. ಎನ್.ಎಲ್.ಬಿ.ಸಿ ಮತ್ತು ಟಿ.ಎಲ್.ಬಿ.ಸಿ ಸಲಹಾ ಸಮಿತಿ ಸಭೆ ಕರೆಯುವದು ಮತ್ತು ಭತ್ತ ಖರೀದಿ ಕೇಂದ್ರ ಆರಂಭ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಯಿತು.’
ನಿನ್ನೆ ಬೆಂಗಳೂರಿನಲ್ಲ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ದೇವದುರ್ಗದ ಶಾಸಕ ಕೆ.ಶಿವನಗೌಡ ನಾಯಕ, ಸಿಂಧನೂರು ಶಾಸಕರಾದ ವೆಂಕಟರಾವ್ ನಾಡಗೌಡ ಮತ್ತು ಸುರಪೂರ ಶಾಸಕರಾದ ರಾಜು ಗೌಡ ಅವರು ಭೇಟಿ ಮಾಡಿ ಭತ್ತ ಖರೀದಿಗೆ ಮನವ ಮಾಡಲಾಯಿತು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಭರವಸೆ ನೀಡಿದ್ದಾರೆ.