ಭತ್ತ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹ

ಹಗರಿಬೊಮ್ಮನಹಳ್ಳಿ.ನ.೦೬ ತಾಲೂಕಿನಲ್ಲಿ ಬತ್ತದ ಖರೀದಿ ಕೇಂದ್ರ ಶೀಘ್ರವಾಗಿ ತೆರೆಯು ವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ತಹಸಿಲ್ದಾರ ಶರಣಮ್ಮ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಬುಡ್ಡಿ ಬಸವರಾಜ್ ಮಾತನಾಡಿ ಈ ವರ್ಷ ರೈತರಿಗೆ ಅತಿ ಹೆಚ್ಚು ಮಳೆಯಾಗಿ ಅತಿವೃಷ್ಟಿಯಿಂದಾಗಿ ಬೆಳೆದ ಬೆಳೆ ಕೈಗೆ ಬಾರದೆ ನೋವು ಅನುಭವಿಸುತ್ತಿದ್ದಾರೆ. ಈಗ ತಾಲೂಕಿನಲ್ಲಿ ಭತ್ತ ಕಟಾವು ಮಾಡುತ್ತಿದ್ದು ರೈತರಿಗೆ ಅನುಕೂಲವಾಗುವಂತೆ ಸರ್ಕಾರ ಕೂಡಲೇ ಖರೀದಿ ಕೇಂದ್ರ ಪ್ರಾರಂಭಿಸ ಬೇಕು ಈಗಾಗಲೇ ದಾವಣಗೆರೆ ಜಿಲ್ಲೆಯಲ್ಲಿ ಖರೀದಿ ಕೇಂದ್ರ ಪ್ರಾರಂಭವಾಗಿದ್ದು ಅದೇ ತರ ನಮ್ಮ ತಾಲೂಕಿನಲ್ಲಿ ಖರೀದಿ ಕೇಂದ್ರ
ತೆರೆದು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಈ ಸಂದರ್ಭದಲ್ಲಿ ರಕ್ಷಣಾ ವೇದಿಕೆಯ ಸೋಮು ,ದೊಡ್ಡಬಸಪ್ಪ, ಉಮಾಶಂಕರ್ ಕೊಟ್ರೇಶಿ ಶಿವಮೂರ್ತಿ ,ಪಂಪಾಪತಿ ,ಜಂಬಣ್ಣ, ಇದಾಯತ್, ಮಂಜುನಾಥ ಹಾಗೂ ಇತರರು ಇದ್ದರು