ಭತ್ತ ಖರೀದಿ ಕೇಂದ್ರ ಆರಂಭಿಸಲು ಸರ್ಕಾರದ ಆದೇಶ

ರೈತರಿಗೆ ಅನುಕೂಲ ಕಲ್ಪಿಸುವ ಭರವಸೆ ನೀಡಿದ ತಹಸೀಲ್ದಾರ್
ಮಾನ್ವಿ.ನ.20- ಇಂದು ನಡೆಸಲು ಉದ್ದೇಶಿಸಿರುವ ರಸ್ತೆ ತಡೆ ತಾತ್ಕಾಲಿಕ ಹಿಂಪಡೆಯಲಾಗಿದೆ
ಸಿಪಿಐ (ಎಂಎಲ್) ರೆಡ್ ಸ್ಟಾರ್ ಹಾಗೂ ಕರ್ನಾಟಕ ರೈತ ಸಂಘ ತಾಲೂಕ ಸಮಿತಿ ಜಂಟಿಯಾಗಿ ಪತ್ರಿಕಾ ಹೇಳಿಕೆ
ಭತ್ತ ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿ ಡಿಸೆಂಬರ್ 20 ರಂದು ಮಾನವಿ ಪಟ್ಟಣದ ಬಸವ ವೃತ್ತದಲ್ಲಿ ರೈತರ ಬೃಹತ್ ರಸ್ತೆ ತಡೆ ಹೋರಾಟ ಮಾಡಲಾಗುವುದು ಎಂದು ಹೇಳಿಕೆ ನೀಡಲಾಗಿತ್ತು, ಇದರ ಭಾಗವಾಗಿ ಇಂದು ದಿನಾಂಕ:19-11-2020 ರಂದು ತಹಶೀಲ್ದಾರರು ಜಿಲ್ಲಾಧಿಕಾರಿಗಳು ಹಾಗೂ ಸಹಾಯಕ ಆಯುಕ್ತರ ನಿರ್ದೇಶನದಂತೆ ನಮ್ಮ ಸಂಘಟನೆಯ ಸಭೆ ಕರೆದು “ಸರ್ಕಾರ ಈಗಾಗಲೇ ಭತ್ತ, ಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವ ಬಗ್ಗೆ ಈಗಾಗಲೇ ನಮಗೆ ಸ್ಪಷ್ಟವಾದ ಆದೇಶ ಬಂದಿದ್ದು, ಸರ್ಕಾರದ ನಿಯಮದಂತೆ ರೈತರ ಭತ್ತ, ಜೋಳ ಖರೀದಿ ಮಾಡಲು ಮುಂದಾಗಲಾಗುವುದು ತಾವು ನಾಳೆ ನಡೆಸಲು ಉದ್ದೇಶಿಸಿರುವ ರಸ್ತೆ ತಡೆ ಹೋರಾಟವನ್ನು ಕೈಬಿಡುವಂತೆ ತಹಸೀಲ್ದಾರರು ಕೋರಿದ್ದರಿಂದ ತಾತ್ಕಾಲಿಕವಾಗಿ ನಾಳೆ ನಡೆಯಲಿರುವ ರಸ್ತೆ ತಡೆ ಹೋರಾಟವನ್ನು ಕೈಬಿಡಲಾಗುವುದು ಎಂದು ತಿಳಿಸಿದ್ದೇವೆ.
ನಮ್ಮ ಒತ್ತಾಯದಂತೆ ತಹಶೀಲ್ದಾರರು ಸರ್ಕಾರ ಹತ್ತಿ ಖರೀದಿಸುವ ಬಗ್ಗೆ ಮತ್ತು ಡಿಸೆಂಬರ ಅಂತ್ಯದೊಳಗೆ ತೊಗರಿ ಬೆಳೆಯ ಬೆಂಬಲ ಬೆಲೆಯಲ್ಲಿ ಖರೀದಿಸಲು ಖರೀದಿ ಕೇಂದ್ರ ಆರಂಭ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲು ಒಪ್ಪಿಕೊಂಡ ಹಿನ್ನೆಲೆಯಲ್ಲಿ ನಮ್ಮ ಡಿಸೆಂಬರ್ 20 ರ ಹೋರಾಟವನ್ನು ತಾತ್ಕಾಲಿಕ ಹಿಂಪಡೆಯಲಾಗಿದೆ.
ಸಭೆಯಲ್ಲಿ ಸಿಪಿಐ (ಎಂಎಲ್) ಜಿಲ್ಲಾ ಕಾರ್ಯದರ್ಶಿ ಕೆ.ನಾಗಲಿಂಗಸ್ವಾಮಿ, ಕರ್ನಾಟಕ ರೈತ ಸಂಘದ ತಾಲ್ಲೂಕು ಅಧ್ಯಕ್ಷ ವಿ.ಮುದುಕಪ್ಪ ನಾಯಕ, ಸಿಪಿಐ (ಎಂಎಲ್) ತಾಲ್ಲೂಕು ಕಾರ್ಯದರ್ಶಿ ಯಲ್ಲಪ್ಪ ಉಟಕನೂರು, ಆನಂದ ಭೋವಿ, ವೀರೇಶ ಗುಡದಿನ್ನಿ, ಮಲ್ಲಯ್ಯ, ಬಸವರಾಜ ಚಾಗಬಾವಿ, ಸುರೇಶ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.