ಭತ್ತ ಖರೀದಿ ಕೇಂದ್ರಕ್ಕೆ ಒತ್ತಾಯ

ರಾಯಚೂರು.ನ.೦೮- ರಾಯಚೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಭತ್ತ ಬೆಳೆದಿದ್ದು, ಕೂಡಲೇ ಖರೀದಿ ಪ್ರಕ್ರಿಯೆ ಆರಂಭಿಸಬೇಕು. ಖರೀದಿ ನಂತರ ಸಮಯಕ್ಕೆ ಸರಿಯಾದ ಹಣ ಸಿಗುವ ಬಗ್ಗೆ ಸಣ್ಣ ರೈತರಲ್ಲಿ ಅನುಮಾನ ಮೂಡಿದೆ.
ಹೀಗಾಗಿ ಹೆಚ್ಚಿನ ರೈತರು ಮುಕ್ತಮಾರುಕಟ್ಟೆಯ ಮೊರೆ ಹೋಗಿದ್ದಾರೆ. ಭತ್ತ ನಾಟಿ ಮಾಡುವ ವೇಳೆಯಲ್ಲಿ ಕ್ರಿಮಿನಾಶಕ ರಸಗೊಬ್ಬರಕ್ಕೆ ಹೂಡಿದ ಬಂಡವಾಳಕ್ಕೆ ಬಡ್ಡಿ ಬೀಳುವ ಆತಂಕದಿಂದ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಭತ್ತ ಮಾರಾಟ ಮಾಡಲು ರೈತರು ಮುಂದಾಗಿದ್ದಾರೆ. ಜಿಲ್ಲೆಯಾದ್ಯಂತ ಸಿಂಧನೂರು, ಮಾನ್ವಿ, ದೇವದುರ್ಗ ತಾಲೂಕು ಭತ್ತದ ಕಟಾವು ಬಹುತೇಕ ಪೂರ್ಣಗೊಂಡಿದೆ. ಭತ್ತ ಖರೀದಿಯನ್ನು ಗ್ರಾಮ ಮತ್ತು ಹೋಬಳಿ ಮಟ್ಟದಲ್ಲಿ ರೈತರು ಇರುವ ಹೊಲದಲ್ಲಿ ಮಾಡುವುದರಿಂದ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ.
ಅದೇ ರೀತಿಯಾಗಿ ಸಣ್ಣ ರೈತರಿಗೆ ಫ್ರೂಟ್ಸ್ ದತ್ತಾಂಶ ನೋಂದಣಿ ಬಗ್ಗೆ ಮಾಹಿತಿ ತಂತ್ರಜ್ಞಾನ ಬಗ್ಗೆ ಮಾಹಿತಿ ಒದಗಿಸಬೇಕು. ಸರ್ಕಾರವು ಭತ್ತ ಖರೀದಿ ಕೇಂದ್ರವನ್ನು ಕಾಟಾಚಾರಕ್ಕೆ ಪ್ರಾರಂಭಿಸಿ ಎರಡು ಮೂರು ದಿನಗಳ ಮಾತ್ರ ಸೀಮಿತಗೊಳಿಸಬಾರದು . ರೈತರಿಗೆ ಸೂಕ್ತವಾದ ಭತ್ತಕ್ಕೆ ಬೆಂಬಲ ಬೆಲೆ ಕೊಡಬೇಕು. ಕೂಡಲೇ ಸರಕಾರ ಎಚ್ಚೆತ್ತುಕೊಂಡು ಖರೀದಿ ಪ್ರಾರಂಭಕ್ಕೆ ಅವಕಾಶ ಮಾಡಿಕೊಡಬೇಕೆಂದು ರಾಜ್ಯ ಆಹಾರ ಸಲಹಾ ಸಮಿತಿ ಸದಸ್ಯರು ಹಾಗೂ ಲೋಕಜನಶಕ್ತಿ ಪಕ್ಷ ಕಿಸಾನ್ ಸೆಲ್ ರಾಜ್ಯಾಧ್ಯಕ್ಷರಾದ ಜಿ.ವೆಂಕಟರೆಡ್ಡಿ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.