ಭತ್ತ ಖರೀದಿ ಕಿರುಕುಳ:ರೊಚ್ಚಿಗೆದ್ದ ರೈತರಿಂದ ಪ್ರತಿಭಟನೆ

*ಗುಣ ಮಟ್ಟದ ನೆಪ ಹೇಳಿದರೆ ಡಿಸಿ ಕಚೇರಿ ಮುಂದೆ ಭತ್ತ ರಾಶಿ
ರಾಯಚೂರು ಮೇ೨೬:-ಕೊರೊನಾ ಮಹಾಮಾರಿ ಹಿನ್ನೆಲ್ಲೆ ಎಪಿಎಂಸಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದ್ದೆ, ಮತ್ತೊಂದೆ ಭತ್ತ ಖರೀದಿ ಕೇಂದ್ರದಲ್ಲಿ ಗುಣ ಮಟ್ಟದ ನೆಪದಲ್ಲಿ ಭತ್ತ ಖರೀದಿ ತಿರಸ್ಕಾರದಿಂದ ತೀವ್ರ ರೊಚ್ಚಿಗೆದ್ದ ರೈತರು ಇಂದು ಎಪಿಎಂಸಿ ಪ್ರಾಂಗಣದಲ್ಲಿ ಇರುವ ಭತ್ತ ಖರೀದಿ ಕೇಂದ್ರ ಮುಂದೆ ಖರೀದಿಗೆ ಆಗ್ರಹಿ ಪ್ರತಿಭಟಿಸಿದರು.
ನಿನ್ನೆ ಅರಶಿಣಗಿ, ಕಾಡ್ಲೂರು ದೇವಸೂಗೂರು ಗ್ರಾಮಗಳ ರೈತರ ಭತ್ತ ಖರೀದಿಗೆ ಖರೀದಿ ಕೇಂದ್ರದಲ್ಲಿ ತಿರಸ್ಕರಿಸಲಾಗಿತ್ತು. ಹಿಂಗಾರು ಬೆಳೆ ಖರೀದಿಸದಿದ್ದರೆ ರೈತರಿಗೆ ತೀವ್ರ ನಷ್ಟವಾಗುತ್ತದೆ ಎಂದು ರೈತರ ವಾದ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ಎಪಿಎಂಸಿ ಯಲ್ಲಿ ವ್ಯವಹಾರ ಸ್ಥಗಿತಗೊಂಡಿದೆ.ಇದರಿಂದ ರೈತರು ಭತ್ತ ಸೇರಿದಂತೆ ಕೃಷಿ ಉತ್ಪನ್ನ ಮಾರಾಟಕ್ಕೆ ಸಮಸ್ಯೆಯಾಗಿದೆ. ಭತ್ತ ಖರೀದಿ ಕೇಂದ್ರ ಇದ್ದರು ರೈತರಿಗೆ ಯಾವುದೆ ಉಪಯೋಗವಿಲ್ಲದಂತಾಗಿದೆ.
ಗುಣಮಟ್ಟ ನೋಡದೆ ರೈತರ ಭತ್ತನ್ನು ಖರೀಸಬೇಕು. ಇಲ್ಲದಿದ್ದರೆ ರೈತರ ಎಲ್ಲ ಭತ್ತ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಚಲ್ಲಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಆಹಾರ ಇಲಾಖೆಯ ಉಪ ನಿರ್ದೇಶಕರಾದ ಅರುಣ ಸಂಗಾವಿ ಅವರು ರೈತರೊಂದಿಗೆ ಸಮಸ್ಯೆ ಬಗ್ಗೆ ಚರ್ಚಿಸಿದರು. ಹಿಂಗಾರು ಭತ್ತ ಯಾವುದೆ ಷರತ್ತು ಇಲ್ಲದೆ ಖರೀದಿಸಬೇಕೆಂಬ ರೈತರ ಒತ್ತಾಯವನ್ನು ಆಲಿಸಿದರು.
ಈ ಬಗ್ಗೆ ರೈತ ಸಂಘದ ಮುಖಂಡರಾದ ಲಕ್ಷಣಗೌಡ ಅವರನ್ನು ಸಂಪರ್ಕಿಸಿ ಮಾಹಿತಿ ಕೇಳಲಾಯಿತು. ಜಿಲ್ಲೆಯಲ್ಲಿ ಭತ್ತ ಕಟಾವು ಪೂರ್ಣಗೊಂಡಿದೆ. ರೈತರು ಭತ್ತ ರಾಶಿ ಗದ್ದೆಗಳಲ್ಲಿ ಸಂಗ್ರಹಿಸಿದ್ದಾರೆ. ಮಾರಾಟಕ್ಕೆ ಅವಕಾಶವಿಲ್ಲದೆ ಮಳೆಯಿಂದ ಭಾರಿ ನಷ್ಟಕ್ಕೆ ಗುರಿಯಾಗುವಂತ ಸ್ಥಿತಿ ಇದೆ.
ಭತ್ತ ಖರೀದಿ ಕೇಂದ್ರದಲ್ಲಿ ಗುಣ ಮಟ್ಟದ ನೆಪದಲ್ಲಿ ಭತ್ತ ಖರೀದಿ ಮಾಡದಿದ್ದರೆ ರೈತರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು. ಭತ್ತ ಖರೀದಿ ಕೇಂದ್ರದಲ್ಲಿ ರೈತರ ಭತ್ತ ಖರೀದಿಸಲೇ ಬೇಕೇಂದು ಒತ್ತಾಯಿಸಿದರು.