ಭತ್ತದ ಬೆಲೆ ಕುಸಿತ : ಕಂಗಾಲಾದ ಅನ್ನದಾತ

????????????????????????????????????

ಸಿರುಗುಪ್ಪ ಮೇ 29 : ಭತ್ತದ ನಾಡು ಎಂದೇ ಪ್ರಖ್ಯಾತಿ ಪಡೆದ ತಾಲೂಕಿನ ರೈತರು ಸಂಕಷ್ಟಕ್ಕೀಡಾಗಿದ್ದಾರೆ ಭತ್ತವನ್ನೇ ಪ್ರಧಾನವಾಗಿ ಬೆಳೆಯುತ್ತಿದ್ದು ಈ ಭಾರಿ ಭತ್ತಕ್ಕೆ ಸೂಕ್ತ ಬೆಲೆಯಿಲ್ಲದೇ ಅನೇಕ ಗ್ರಾಮಗಳಲ್ಲಿ ದೇವಸ್ಥಾನಗಳ ಆವರಣ, ರಸ್ತೆಗಳ ಬದಿ ಮತ್ತು ಖಾಲಿರುವ ಹೊಲಗಳಲ್ಲಿ ಭತ್ತದ ರಾಶಿಯನ್ನು ಸಂಗ್ರಹಿಸಿ ಚಿಂತಾಕ್ರಾಂತರಾಗಿದ್ದಾರೆ.
ಬೆಲೆ ಇಲ್ಲದೆ ಮುಚ್ಚಿಟ್ಟ ಭತ್ತದ ರಾಶಿಗಳು ದನ, ಕುರಿ, ಹಂದಿಗಳ ಪಾಲಾಗುತ್ತಿವೆ. ಬೆಲೆ ಏರಿಕೆಯ ನಿರೀಕ್ಷೆಯಲ್ಲಿ ಬಕಪಕ್ಷಿಯಂತೆ ಕಾದು ಕುಳಿತ್ತಿದ್ದಾರೆ, ಸರ್ಕಾರವು ಬೆಂಬಲ ಬೆಲೆಯನ್ನು ಘೋಷಿಸಿ ಭತ್ತ ಖರೀದಿ ಕೇಂದ್ರಗಳಲ್ಲಿ ಭತ್ತದ ಬೆಳೆ ನೋಂದಾಣಿಗೆ ಮಾತ್ರ ಸೀಮಿತವಾಗಿದೆ, ಖರೀದಿಯ ನಿರೀಕ್ಷೆಯಲ್ಲಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ರೈತರ ಸಮಸ್ಯೆ : ಮುಂಗಾರು ಬೆಳೆಯಲ್ಲಿ ಭತ್ತಕ್ಕೆ ಕಣೆನೊಣದ ಭಾದೆಯಿಂದ ಕಂಗಾಲಾಗಿದ್ದು, ಹರಸಾಹಸ ಮಾಡಿ ಎರಡನೇ ಬೆಳೆಯನ್ನೂ ಬೆಳೆದಿದ್ದ ರೈತರಿಗೆ ಬೆಲೆ ಕುಸಿತದ ಆಘಾತವಾಗಿದೆ, ಭತ್ತವು ಕಟಾವಿಗೆ ಬಂದಾಗ ಪ್ರಕೃತಿ ವಿಕೋಪ, ಅನಿಶ್ಚಿತ ಕೀಟಗಳ ಭಾದೆಗಳ ನಡುವೆ ಭತ್ತವನ್ನು ಬೆಳೆದರೆ ಕರೋನಾ ಮಹಾಮಾರಿಯಿಂದ ಬೆಲೆ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ, ಸ್ವಂತ ಜಮೀನುಗಳಿಲ್ಲದೇ ಸಾಗುವಳಿ ಮಾಡಿದ ಪರಿಸ್ಥಿತಿ ಚಿಂತಜನಕವಾಗಿದೆ, ಸಾಗುವಳಿ ಕಟ್ಟಲು ಆಗದೆ, ಬೆಳೆದ ಭತ್ತಕ್ಕೆ ಬೆಲೆ ಇಲ್ಲದೆ ಮೌನಮುರಿದಿದೆ, ಭತ್ತದ ಬೆಳೆಗೆ ಅಧಿಕ ಖರ್ಚಿಗಾಗಿ ಸಾಲಶೂಲ ಮಾಡಿ ಕೃಷಿಯನ್ನು ಮಾಡಿದರೆ ಜೀವನ ಸಾಗಿಸುವುದು ಕಷ್ಟಕರವಾಗಿದೆ, ಈ ಪರಿಸ್ಥಿತಿ ಹೀಗೆ ಮುಂದುವರೆದರೆ ರೈತರ ಕುಟುಂಬಗಳು ಬದುಕು ಬೀದಿಗೆ ಬರುವಂತಾಗುತ್ತವೆ.
ಕೇಂದ್ರ ಮತ್ತು ರಾಜ್ಯ ಸರ್ಕಾರವು ಬರಿ ಕೋವಿಡ್-19 ವೈರಸ್ ನಿಯಂತ್ರಣದಲ್ಲಿದ್ದಾರೆ ರೈತರ ಸಮಸ್ಯೆಗಳನ್ನು ಆಲಿಸುವವರು ಯಾರು, ರೈತರ ಆತ್ಮಹತ್ಯಗೆ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ರೈತರ ಅಭಿಪ್ರಾಯವಾಗಿದೆ.

ತುಂಗಭದ್ರೆಯ ತೀರದ ಪ್ರದೇಶವು ಅಚ್ಚುಕಟ್ಟಾಗಿದ್ದು ಸುಮಾರು 30 ವರ್ಷದಿಂದಲೂ ಭತ್ತವನ್ನೇ ಬೆಳೆಯುತ್ತಿದ್ದೇವೆ ಈ ಸಲ ಭತ್ತದ ಧರ 1200 ರಿಂದ 1400 ಮಾತ್ರವಿದೆ ಸರ್ಕಾರವೂ ಪ್ರತಿ ಕ್ವಿಂಟಾಲ್‍ಗೆ 1850 ರೂ ಬೆಂಬಲ ಘೋಷಿಸಿ ಭತ್ತ ಕಟಾವು ಮಾಡುವಾಗ ಸರ್ಕಾರವು ನೊಂದಣಿ ಪ್ರಕ್ರೀಯೇ ಮಾಡಿಕೊಳ್ಳುತ್ತದೆ, ಕಟಾವಾದ ಭತ್ತವು ರಸ್ತೆ, ಶಾಲಾ ಮೈದಾನ, ದೇವಸ್ಥಾನದ ಆವರಣದಲ್ಲಿ ಹಾಕಿ ಕಾದು ಕುಳಿತುಕೊಳ್ಳುವಂತಾಗಿದೆ, ತಾಲೂಕಿನಲ್ಲಿ ಅತಿಹೆಚ್ಚು ರೈಸ್ ಮಿಲ್‍ಗಳಿದ್ದರೂ ದಲ್ಲಾಳಿಗಳ ಮದ್ಯಸ್ಥಿಕೆಯಿಂದಾಗಿ ಭತ್ತದ ಬೆಲೆ ಸಂಪೂರ್ಣ ಕುಸಿತಗೊಂಡಿದ್ದು ಕರೋನಾಕ್ಕಿಂತ ಇದು ದೊಡ್ಡ ಆಘಾತವಾಗಿದೆ ಕೂಡಲೇ ಇದಕ್ಕೆ ಸಂಬಂದಪಟ್ಟ ಅಧಿಕಾರಿಗಳು ಗಮನಹರಿಸಿ ಸಮಸ್ಯೆಯನ್ನು ಇತ್ಯರ್ಥಗೊಳಿಸಿ ರೈತರಿಗೆ ನ್ಯಾಯ ಒದಗಿಸಬೇಕು

  • ಎನ್.ರಾಮಮೂರ್ತಿ. ಪ್ರಗತಿಪರ ರೈತ, ನಿಟ್ಟೂರು ಗ್ರಾಮ ಸಿರುಗುಪ್ಪ ತಾಲೂಕು.