ಭತ್ತದಲ್ಲಿ ನೇರ ಕೂರಿಗೆ ಬಿತ್ತನೆಯ ಕ್ಷೇತ್ರೋತ್ಸವ

ರಾಯಚೂರು.ನ.೪-ಜಿಲ್ಲೆಯ ಶ್ರೀರಾಮನಗರ ಕ್ಯಾಂಪನಲ್ಲಿ ಶ್ರೀನಿವಾಸ ರವರ ಹೊಲದಲ್ಲಿ ನೇರ ಕೂರಿಗೆ ಬಿತ್ತನೆಯ ಕ್ಷೇತ್ರೋತ್ಸವ ಹಾಗೂ ತರಬೇತಿ ಕಾರ್ಯಕ್ರಮವನ್ನು ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ರಾಯಚೂರು ಇವರು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಡಾ. ಜಿ.ಎಸ್. ಯಡಹಳ್ಳಿ, ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು ಇವರ ಭಾಷಣದಲ್ಲಿ ರಾಯಚೂರು ಜಿಲ್ಲೆಯಲ್ಲಿ ಈ ವರ್ಷ ಚೆನ್ನಾಗಿ ಮಳೆ ಆಗಿರುವುದರಿಂದ ಸುಮಾರು ೭೫ ಸಾವಿರ ಹೇಕ್ಟರಷ್ಟು ನಷ್ಟು ನೇರ ಕೂರಿಗೆ ಬಿತ್ತನೆ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ನೇರ ಕೂರಿಗೆ ಬಿತ್ತನೆಯನ್ನು ನಾಟಿ ಪದ್ಧತಿಗೆ ಹೊಲಿಸಿ ನೋಡಿದಾಗ ಇದರಿಂದಾಗುವ ಲಾಭಗಳು:
ಸೂಕ್ತ ಸಮಯದಲ್ಲಿ ಬಿತ್ತನೆ, ಮುಖ್ಯ ಭೂಮಿ ತಯಾರಿಸುವ ಮತ್ತು ಸಸಿಮಡಿ ತಯಾರಿಸಿ ಅದನ್ನು ಸಂರಕ್ಷಿಸುವ ಖರ್ಚುನ್ನು ಉಳಿಸಬಹುದು.
ಬಿತ್ತನೆಗೆ ಎಕರೆಗೆ ೮-೧೨ ಕಿ. ಗ್ರಾಂ. ಬೀಜ ಸಾಕು. ಎಕರೆಗೆ ೮-೧೦ ಲೀ. ಇಂಧನ ಉಳಿತಾಯ ಹಾಗೂ ಪರಿಸರ ಮಾಲಿನ್ಯ ಕಡಿಮೆ. ಕೂರಿಗೆ ಭತ್ತದ ಬೇಸಾಯದಿಂದ ಶೇ. ೧೭-೩೫ ರಷ್ಟು ನೀರಿನ ಉಳಿತಾಯ.
ಕಡಿಮೆ (ಶೇ. ೨೫ ರಿಂದ ೩೦ ರಷ್ಟು) ರಸಗೊಬ್ಬರ ಬಳಕೆಯೊಂದಿಗೆ ಕಡಿಮೆ ಖರ್ಚು ಮತ್ತು ಹೆಚ್ಚು ನಿವ್ವಳ ಆದಾಯ.
ನೀರಿನ ಸದ್ಬಳಕೆ, ಹೆಚ್ಚಿನ ಪ್ರದೇಶಕ್ಕೆ ನೀರಾವರಿ ಮತ್ತು ಉತ್ಪಾದಕತೆ ಹೆಚ್ಚಳ ಹಾಗೂ ಅತೀ ನೀರಿನ ಬಳಕೆಯಿಂದಾಗುವ ದುಷ್ಪರಿಣಾಮಗಳನ್ನು ತಡೆಯಬಹುದು.
ಡಾ. ಶ್ರೀವಾಣಿ. ಜಿ.ಎನ್.ವಿಜ್ಞಾನಿ (ಕೃಷಿ.ಕೀಟಶಾಸ್ತ್ರ), ಕೃಷಿ ವಿಜ್ಞಾನ ಕೇಂದ್ರ, ರಾಯಚೂರು ಇವರು ಭತ್ತದಲ್ಲಿ ಬೇಸಾಯ ವೆಚ್ಚ ಕಡಿಮೆಗೊಳಿಸುವಲ್ಲಿ ಕೀಟ ಹಾಗೂ ರೋಗಗಳ ನಿರ್ವಹಣೆ ಅತಿ ಮುಖ್ಯ. ಭತ್ತದಲ್ಲಿ ಅಲ್ಪಾವಧಿ ತಳಿಗಳ ಬಳಕೆ ಹಾಗೂ ನೀರಾವರಿ ನಿರ್ವಹಣೆ, ಕೀಟ ಹಾಗೂ ರೋಗಗಳ ಭಾದೆಗೆ ಪೂರಕವಾಗಿವೆ. ಹಾಗಾಗಿ ರೈತರು ಭತ್ತದಲ್ಲಿ ಗದ್ದೆಗೆ ನೀರು ಒದಗಿಸುವುದು ಹಾಗೂ ಖಾಲಿ ಮಾಡುವ ಪದ್ಧತಿಯನ್ನು ಶಿಫಾರಸ್ಸಿನಂತೆ ಅಳವಡಿಸಿದ್ದಲ್ಲಿ ಕೀಟಗಳ ಪ್ರಮಾಣ ಕಡಿಮೆ ಗೊಳಿಸಬಹುದಾಗಿದೆ. ಭತ್ತದಲ್ಲಿ ಸಾರಜನಕ ಪೂರೈಕೆ ಹೆಚ್ಚಿಸಿದಲ್ಲಿ ರಸಹೀರುವ ಕೀಟಗಳು ಹೆಚ್ಚಾಗುತ್ತವೆ. ಹಾಗಾಗಿ, ಶಿಫಾರಸ್ಸು ಮಾಡಿದ ಸಾರಜನಕದೊಂದಿಗೆ ಸಾವಯವಗೊಬ್ಬರ ಬಳಸುವುದು ಅತ್ಯವಶ್ಯಕ ಎಂದು ತಿಳಿಸಿದರು.
ಡಾ. ಅನುಪಮಾ ಸಿ. (ಗೃಹ ವಿಜ್ಞಾನ) ಇವರು ಕೊಯ್ಲೋತ್ತರ ತಂತ್ರಜ್ಞಾನಗಳ ಕುರಿತು ರೈತರಿಗೆ ಮನವರಿಕೆ ಮಾಡಿಕೊಟ್ಟು ಕೃಷಿಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಕುರಿತು ಮಾತಾನಾಡಿದರು.
ಡಿ.ಬಿ.ಟಿ. ಕಿಸಾನ ಬಯೋಟೆಕ್ ಹಬ್ ಯೋಜನೆಯಡಿಯಲ್ಲಿ ಸಂಶೋಧನಾ ಸಹಾಯಕರಾದ ಡಾ. ನಾಗರಾಜ ಇವರು ಎಲ್ಲರನ್ನು ಸ್ವಾಗತಿಸಿದರು ಹಾಗೂ ವಂದಿಸಿದರು.