ಭತ್ತತುಂಬಿದ್ದ ಲಾರಿ ಪಲ್ಟಿ; ಚಾಲಕ ಪಾರು

ದಾವಣಗೆರೆ.ಮೇ.೨೦; ಭತ್ತ ತುಂಬಿದ ಲಾರಿಯೊಂದು ಪಲ್ಟಿಯಾದ ಘಟನೆ ನಗರದ ಕೊಂಡಜ್ಜಿ ರಸ್ತೆಯ ಆವರಗೊಳ್ಳ ಮತ್ತು ಯರಗುಂಟೆ ಮಧ್ಯೆ ನಡೆದಿದೆ.ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನಿಂದ ದಾವಣಗೆರೆಗೆ ಭತ್ತ ತುಂಬಿಕೊಂಡು ಬರುವ ವೇಳೆ ಘಟನೆ ನಡೆದಿದೆ. ಯರಗುಂಟೆ ಮತ್ತು ಆವರಗೊಳ್ಳ ಮಧ್ಯೆ ಇರುವ ತಿರುವಿನಲ್ಲಿ ಈ ಘಟನೆ ನಡೆದಿದೆ. ಲಾರಿ ಸಂಪೂರ್ಣವಾಗಿ ಪಲ್ಟಿಯಾಗಿದೆ. ಲಾರಿ ಚಾಲಕ ಹೊರತುಪಡಿಸಿ, ಲಾರಿಯಲ್ಲಿ ಯಾರು ಕೂಡ ಇರಲಿಲ್ಲ. ಚಾಲಕನಿ ಯಾವುದೇ ಪ್ರಾಣಾಪಾಯವಾಗಿಲ್ಲ. ತಲೆಗೆ ಸ್ವಲ್ಪ ಮಟ್ಟಿಗೆ ಪೆಟ್ಟು ಬಿದ್ದಿದೆ. ಸ್ಥಳೀಯ ಕೂಡಲೇ ಆಂಬ್ಯುಲೆನ್ಸ್ ಗೆ ಕರೆ ಮಾಡಿ, ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.