
ಸಂಜೆವಾಣಿ ವಾರ್ತೆ
ಚಾಮರಾಜನಗರ, ನ.08-ಸರ್ಕಾರದ ಕನಿಷ್ಠ ಬೆಂಬಲ ಯೋಜನೆಯಡಿರೈತರಿಂದ ಭತ್ತಖರೀದಿಸಲು ಸರ್ಕಾರವು ಅನುಮತಿಸಿರುವ ಹಿನ್ನೆಲೆಯಲ್ಲಿಜಿಲ್ಲೆಯಲ್ಲಿಖರೀದಿ ಕೇಂದ್ರಗಳ ನಿರ್ವಹಣೆಗೆಅಗತ್ಯ ಸಿದ್ದತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಜಿಲ್ಲಾಧಿಕಾರಿಕಚೇರಿ ಸಭಾಂಗಣದಲ್ಲಿಂದು ಕನಿಷ್ಠ ಬೆಂಬಲ ಬೆಲೆ ಯೋಜನೆ ಸಂಬಂಧ ನಡೆದಜಿಲ್ಲಾಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2023-24ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿರೈತರಿಂದ ಭತ್ತಖರೀದಿಗಾಗಿ ಸರ್ಕಾರಅನುಮತಿ ನೀಡಿದೆ. ನವೆಂಬರ್ 15ರಿಂದರೈತರ ನೋಂದಣಿ ಪ್ರಕ್ರಿಯೆಆರಂಭಿಸಬೇಕು. ಡಿಸೆಂಬರ್ 1 ರಿಂದ ನೋಂದಾಯಿತರೈತರಿಂದ ಭತ್ತಖರೀದಿಸಬೇಕು. ಕರ್ನಾಟಕರಾಜ್ಯ ಸಹಕಾರ ಮಾರುಕಟ್ಟೆ ಮಹಾ ಮಂಡಳಿಯನ್ನು ಖರೀದಿಗೆ ಸಂಗ್ರಹಣಾ ಸಂಸ್ಥೆಯನ್ನಾಗಿ ನಿಯೋಜಿಸಲಾಗಿದೆಎಂದರು.
ಪ್ರತಿಖರೀದಿ ಕೇಂದ್ರಕ್ಕೆ ಕೃಷಿ ಇಲಾಖೆ ವತಿಯಿಂದ ಗ್ರೇಡರ್‍ಗಳನ್ನು ನೇಮಿಸಬೇಕು. ಖರೀದಿ ಏಜೆನ್ಸಿಯ ಹಿರಿಯ ಅಧಿಕಾರಿಗಳು ಖರೀದಿ ಕೇಂದ್ರದಕಾರ್ಯ ಪ್ರಗತಿ ಬಗ್ಗೆ ಮೇಲುಸ್ತುವಾರಿ ಮಾಡಿತಪಾಸಣೆ ಮಾಡಬೇಕು. ಭತ್ತವನ್ನು ಸರಬರಾಜು ಮಾಡಿದರೈತರಿಗೆ 15 ದಿನಗಳೊಳಗೆ ಅವರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಹಣಜಮೆ ಮಾಡಬೇಕು. ಮಧ್ಯವರ್ತಿಗಳಿಗೆ ಅವಕಾಶ ಕೊಡಬಾರದು. ಪಾರದರ್ಶಕವಾಗಿರೈತರ ನೋಂದಣಿ ಹಾಗೂ ಭತ್ತಖರೀದಿ ಪ್ರಕ್ರಿಯೆ ನಡೆಸಬೇಕುಎಂದುಜಿಲ್ಲಾಧಿಕಾರಿಕಟ್ಟುನಿಟ್ಟಿನ ಸೂಚನೆ ನೀಡಿದರು.
ನೋಂದಣಿಕೇಂದ್ರತೆರೆಯಲುಅಗತ್ಯವಿರುವಕಂಪ್ಯೂಟರ್, ವಿದ್ಯುತ್, ಗೋದಾಮು ವ್ಯವಸ್ಥೆ, ಸಿಬ್ಬಂದಿ ನೇಮಕ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ರೈತರಿಂದ ಭತ್ತವನ್ನು ಖರೀದಿಸಿ ಗೋದಾಮುಗಳಲ್ಲಿ ಸಂಗ್ರಹಿಸಿ ಭತ್ತವನ್ನು ಹಲ್ಲಿಂಗ್‍ಗಾಗಿ ಹತ್ತಿರವಿರುವ ನೋಂದಾಯಿತ ಅಕ್ಕಿ ಗಿರಣಿಗಳಿಗೆ ಸಾಗಾಣಿಕೆ ಮಾಡಬೇಕುಎಂದರು.
ಎಲ್ಲರೈತ ಸಂಪರ್ಕಕೇಂದ್ರ, ತಾಲೂಕುಕೇಂದ್ರ, ಗ್ರಾಮ ಪಂಚಾಯಿತಿಗಳಲ್ಲಿ ಖರೀದಿ ಕೇಂದ್ರಗಳ ವಿವರ, ನೋಂದಣಿ, ಭತ್ತಕ್ಕೆ ಸರ್ಕಾರ ನಿಗದಿಪಡಿಸಿರುವ ದರ ಸೇರಿದಂತೆ ಮಾಹಿತಿ ನೀಡಬೇಕು. ಕಚೇರಿ, ಗೋದಾಮುಗಳ ಮುಂದೆಯೂಖರೀದಿ ಕೇಂದ್ರ ನೋಂದಣಿಕುರಿತ ಮಾಹಿತಿಯ ಬ್ಯಾನರ್‍ಗಳನ್ನು ಪ್ರದರ್ಶಿಸಬೇಕು ಎಂದುಜಿಲ್ಲಾಧಿಕಾರಿ ಶಿಲ್ಪಾ ನಾಗ್‍ಅವರು ತಿಳಿಸಿದರು.
ಉಪವಿಭಾಗಾಧಿಕಾರಿ ಮಹೇಶ್, ಆಹಾರ, ನಾಗರಿಕ ಸರಬರಾಜು ಮತ್ತುಗ್ರಾಹಕ ವ್ಯವಹಾರಗಳ ಇಲಾಖೆಯಉಪನಿರ್ದೇಶಕÀಯೋಗಾನಂದ, ಜಂಟಿ ಕೃಷಿ ನಿರ್ದೇಶಕಎಸ್.ಎಸ್. ಆಬೀದ್, ಕರ್ನಾಟಕಆಹಾರ ನಿಗಮದಜಿಲ್ಲಾ ವ್ಯವಸ್ಥಾಪಕ ಬಾಲಕೃಷ್ಣ, ಕರ್ನಾಟಕರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಜಿಲ್ಲಾ ಶಾಖಾ ವ್ಯವಸ್ಥಾಪಕರವೀಂದ್ರ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಪ್ರಕಾಶ್, ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.