ಭತ್ತಕ್ಕೆ ಬೆಂಬಲ ಬೆಲೆನಿಗದಿಗೆ ಒತ್ತಾಯಿಸಿ ದಿ.12 ಬೃಹತ್ ಪ್ರತಿಭಟನೆ

ಸಿರವಾರ.ನಂ.೧೦- ಭತ್ತ ಸೇರಿದಂತೆ ಇನ್ನಿತರ ಬೆಳೆಗಳ ಬೆಲೆಗಳು ಪಾತಾಳಕ್ಕೆ ಇಳಿಯುತ್ತಿದ್ದೂ, ಶೀಘ್ರವೇ ಖರೀದಿ ಕೇಂದ್ರ ತೆರೆದು, ಭತ್ತ ಕಟ್ಟಾವು ಯಂತ್ರಕ್ಕೆ ನಿರ್ಧಿಷ್ಠ ಧರ ನಿಗದಿ ಮಾಡುವಂತೆ ಒತ್ತಾಯಿಸಿ ನಂ ೧೩ ರಂದು ಸಿರವಾರದಲ್ಲಿ ಬೃಹತ್ ಪ್ರತಿಭಟನೆಯನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಹಮ್ಮಿಕೊಳಲಾಗಿದೆ ಎಂದು ಜಿಲ್ಲಾದ್ಯಕ್ಷ ಸೂಗುರಯ್ಯ ಎಸ್.ಮಠ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ಬೆಳಗ್ಗೆ ಮಾತನಾಡಿದ ಅವರು ಪ್ರತಿ ವರ್ಷ ರೈತರು ಬೆಸಾಯಕ್ಕೆ ಮಾಡುವ ಖರ್ಚು ಅದಿಕವಾಗಿದ್ದೂ, ಆದಾಯ ಕಡಿಮೆಯಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಭತ್ತ ಕಟ್ಟಾವು ಪ್ರಾರಂಭವಾಗಿದ್ದೂ ಮುಕ್ತ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲದೆ ರೈತರು ಕಂಗಾಲು ಆಗಿದ್ದಾರೆ. ಸರ್ಕಾರ ಕೂಡಲೇ ಪ್ರತಿ ಗ್ರಾ.ಪಂ ಗೊಂದು ಭತ್ತ ಸೇರಿದಂತೆ ಇನ್ನಿತರ ಬೆಳೆಗಳ ಖರೀದಿ ಕೇಂದ್ರಗಳನ್ನು ತೆರೆಯಬೇಕು,ಸರ್ಕಾರ ಘೋಷಣೆ ಮಾಡಿರುವ ಎಂ.ಎಸ್.ಪಿ.ಧರಕ್ಕಿಂತ ಕಡಿಮೆ ಧರದಲ್ಲಿ ಮಾರಾಟವಾದರೆ ಸರ್ಕಾರ ಕಾನೂನು ಕ್ರಮಕೈಗೊಳಬೇಕು. ಜಿಲ್ಲೆಯಲ್ಲಿ ವಿಫರೀತ ಮಳೆಯಿಂದಾಗಿ ಬೆಳೆ ಮಷ್ಟವಾಗಿದೆ, ಸಮಗ್ರವಾಗಿ ಸಮೀಕ್ಷೆ ಮಾಡಿ ಎಲ್ಲಾ ಬೆಳೆಗಳಿಗೆ ಪರಿಹಾರ ನೀಡಬೇಕು. ಜಿಲ್ಲೆಯಲ್ಲಿ ೧,೯೦,೦೦ ಸಾವಿರ ಹೇಕ್ಟೇರ್ ಪ್ರದೇಶದಲ್ಲಿ ಬೆಳೆ ಬಿತ್ತನೆ ಮಾಡಲಾಗಿದೆ. ಆಬೆಳೆಗಳಿಗೆ ತೊಂದರೆಯಾಗದಂತೆ ತುಂಗಭದ್ರಾ ನಾಲೆಯ ಮೂಲಕ ನೀರು ಹರಿಸಬೇಕು. ಎಂದು ಒತ್ತಾಯಿಸಿ ಇದೇ ತಿಂಗಳು ೧೩ ರಂದು ಸಿರವಾರ ಪಟ್ಟಣದಲ್ಲಿ ಬೃಹತ್ ಬಸವೇಶ್ವರ ವೃತ್ತದಿಂದ ತಹಸೀಲ್ದಾರ ಕಛೇರಿಯವರಗೂ ಬೃಹತ್ ಪ್ರತಿಭಟನೆ ಹಮ್ಮಿಕೊಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಸಿಂಗರೇಡ್ಡಿ ಪಾಟೀಲ್, ಎಸ್.ಶಕ್ರಪ್ಪ. ಬಸವರಾಜ ನವಲಕಲ್, ಕೆ.ಬಸವರಾಜ್ ನವಲಕಲ್, ಶರಣಪ್ಪಗೌಡ, ಚಂದ್ರಶೇಖರ ಕುರಕುಂದಾ, ಪರಮಣ ಕುರುಕುಂದಾ ಸೇರಿದಂತೆ ಇನ್ನಿತರರು ಇದ್ದರು.