ಭಟ್ರಳ್ಳಿಯಲ್ಲಿ ರಾಮನವಮಿ ಆಚರಣೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.17: ಸ್ವಾತಂತ್ರ್ಯ ಪೂರ್ವದಲ್ಲಿ    ‌ತಾಲೂಕಿನ ಭಟ್ರಹಳ್ಳಿ ಗ್ರಾಮದ ಸೀತಾ,ರಾಮ, ಲಕ್ಷ್ಮಣ ಶತೃಘ್ನ ಹಾಗೂ ಆಂಜನೇಯ ಸಮೇತ ಪ್ರತಿಷ್ಠಾಪನೆ‌ಗೊಂಡ  ಪಟ್ಟಾಭಿರಾಮ ದೇವಾಲಯದಲ್ಲಿ  ಶ್ರೀರಾಮ ನವಮಿಯನ್ನು  ಭಕ್ತಿ, ಸಡಗರದಿಂದ  ಇಂದು ಆಚರಿಸಲಾಯಿತು.‌
 ಬೆಳಿಗ್ಗೆ ನೈರ್ಮಲ್ಯ ಅಷ್ಟೋತ್ತರ. ಪಂಚಾಮೃತ ಅಭಿಷೇಕ ‌ನಡೆದವು. ವಿವಿದ‌ಪುಷ್ಪಗಳಿಂದ ಅಲಂಕಾರ ‌ಮಾಡಲಾಗಿತ್ತು.
ವಿವಿಧ ಪಂಡಿತರಿಂದ ಉಪನ್ಯಾಸ ಗಳು‌ ಜರುಗಿದವು. ವಿವಿಧ ಭಜನಾ ಮಂಡಳಿ ಗಳಿಂದ ಶ್ರೀರಾಮನಾಮಗಳ‌‌ ಸಾಮೂಹಿಕ ಸಂಕೀರ್ತನೆ ನಡೆಯಿತು.  ‌
‌ಮಹಾಮಂಗಳಾರತಿ,  ‌ಸಕಲ ಭಕ್ತಾದಿಗಳಿಗೆ ತೀರ್ಥ ಪ್ರಸಾದ ಜರುಗಿತು.