ಭಟ್ಟರ ಹೊಸ ಗರಡಿ

ಗಾಳಿಪಟ–2 ಚಿತ್ರದ ನಂತರ ನಿರ್ದೇಶಕ ಯೋಗರಾಜ್ ಭಟ್ ಹೊಸ “ಗರಡಿ” ಪ್ರವೇಶ ಮಾಡಿದ್ದಾರೆ‌. ಇದಕ್ಕಾಗಿ ಸಚಿವ ಬಿಸಿ ಪಾಟೀಲ್ ಮತ್ತು ಪತ್ನಿ ವನಜಾ ಪಾಟೀಲ್ ಸಹಕಾರ ಪಡೆದಿದ್ದಾರೆ‌.

ಅಂದಹಾಗೆ ಯೋಗರಾಜ್ ಭಟ್  ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರ ‘ ಗರಡಿ” ಈ ಚಿತ್ರವನ್ನು ವನಜಾ ಪಾಟೀಲ್  ಹಾಗು ಪುತ್ರಿ ಸೃಷ್ಟಿ ಪಾಟೀಲ್ ನಿರ್ಮಾಣ ಮಾಡುತ್ತಿದ್ದಾರೆ.

ಯುವ ನಟ ಯಶಸ್ ಸೂರ್ಯ ನಟಿಸುತ್ತಿದ್ಡು, ಕೌರವ ಬಿ.ಸಿ ಪಾಟೀಲ್ ಬಹಳ ದಿನಗಳ ನಂತರ ಪ್ರಮುಖ ಪಾತ್ರಕ್ಕಾಗಿ ಸಿನಿಮಾದ ಮೂಲಕ ಮತ್ತೆ ಬಣ್ಣ ಹಚ್ಚಲಿದ್ದಾರೆ. ಚಿತ್ರದಲ್ಲಿ ಕನ್ನಡದ ಸ್ಟಾರ್ ನಟರೊಬ್ಬರು ಅತಿಥಿ ಪಾತ್ರ ನಿರ್ವಹಿಸಲಿದ್ದಾರೆ .

ನಾಯಕಿ ಸೇರಿದಂತೆ  ಪ್ರಮುಖ ಪಾತ್ರಗಳಿಗಾಗಿ ಕಲಾವಿದರ ಆಯ್ಕೆ ಪ್ರಗತಿಯಲ್ಲಿದೆ. ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನೀಡುತ್ತಿದ್ದು, ಜಯಂತ ಕಾಯ್ಕಿಣಿ ಹಾಗು ಯೋಗರಾಜ್ ಭಟ್ ಸಾಹಿತ್ಯ ರಚಿಸಲಿದ್ದಾರೆ. ನಿರಂಜನ್ ಬಾಬು ಇದೇ ಬಾರಿಗೆ ಭಟ್ಟರ ಸಿನಿಮಾದಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡಲಿದ್ದು“ಡ್ರಾಮಾ” ಚಿತ್ರಕ್ಕೆ ಚಿತ್ರಕಥೆ ರಚಿಸಿದ್ದ ವಿಕಾಸ್ , ಈ ಚಿತ್ರದಲ್ಲಿ ಭಟ್ಟರ ಜೊತೆ ಮತ್ತೊಮ್ಮೆ ಕೈಜೋಡಿಸಿದ್ದಾರೆ. ಚಿತ್ರದ ‘ಮುಹೂರ್ತ’ ಹಾಗು ಸಿನಿಮಾ ಶೀರ್ಷಿಕೆ ಬಿಡುಗಡೆ ಹಾವೇರಿ ಜಿಲ್ಲೆಯ ಹಿರೆಕೆರೂರಿನಲ್ಲಿ ಇತ್ತೀಚೆಗಷ್ಟೇ ನಡೆಯಿತು.