ಭಜನೆಯಲ್ಲಿ ಮೈಮರೆತು ಕೋವಿಂದ್ ನಿಯಮ ಉಲ್ಲಂಘಿಸಿದ ಸಚಿವ ಚವ್ಹಾಣ್

ಬೀದರ:ಅ.31: ಜಿಲ್ಲೆಯ ಕಮಲಮಗರ ತಾಲೂಕಿನ ಭವಾನಿ ಬಿಜಲಗಾಂವ್​ ಗ್ರಾಮದ ಭವಾನಿ ಮಾತೆ ಮಂದಿರದಲ್ಲಿ ಅಖಂಡ ಹರಿನಾಮ ಸಪ್ತಾಹ ಆರೋಜಿಸಲಾಗಿತ್ತು. ಇದರಲ್ಲಿ ಪಾಲ್ಗೊಂಡ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಭಜನೆ ಹಾಡಿಗೆ ಮೈಮರೆತು ಕುಣಿದಿದ್ದಾರೆ.

ಸಮಾರಂಭದಲ್ಲಿ ಭಜನಾ ಮಂಡಳಿಯ ಕೀರ್ತನಾಕಾರರು

ಪಂಢರಿನಾಥನ ಭಜನೆ ಮಾಡುತ್ತಿದ್ದರು. ಇದನ್ನ ಕೇಳುತ್ತಾ ಮೈಮರೆತ ಸಚಿವರು ಭಜನೆಗೆ ಹೆಜ್ಜೆ ಹಾಕಿದರು.
ಆದರೆ ಕಾರ್ಯಕ್ರಮದಲ್ಲಿ ಯಾರೊಬ್ಬರೂ ಮುಖಕ್ಕೆ ಮಾಸ್ಕ್​ ಹಾಕಿಕೊಳ್ಳದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ, ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.