ಭಗ್ನ ಪ್ರೇಮಿಯಿಂದ ಪ್ರೇಯಸಿಗೆ ಚಾಕು ಇರಿತ

ಮೈಸೂರು, ನ.15: ಭಗ್ನ ಪ್ರೇಮಿಯೊಬ್ಬ ತನ್ನ ಪ್ರೇಯಸಿಗೆ ಚಾಕುವಿನಿಂದ ಇರಿದಿರುವ ಘಟನೆ ಭಾನುವಾರ ನಡೆದಿದೆ.
ನಗರದ ಕೆ.ಆರ್. ಮೊಹಲ್ಲಾದ ದಿವಾನ್ಸ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು,ದೇವರಾಜ ಮೊಹಲ್ಲಾದ ಬೆಳ್ಳಿ ಕಟ್ಟಿಗೆ ಮಿಷಿನ್ ನಿವಾಸಿ ಗಗನ್ ಹಾಗೂ ದಿವಾನ್ಸ್ ರಸ್ತೆಯ ಅಶ್ವಿನಿ ಇವರಿಬ್ಬರು ಪರಸ್ಪರ ಕಳೆದ 5 ವರ್ಷಗಳಿಂದ ಪ್ರೀತಿಸುತ್ತದ್ದು, ಸುಂದರ ಭವಿಷ್ಯದ ಕನಸ್ಸು ಕಂಡಿದ್ದರು.
ಇತ್ತೀಚೆಗೆ ಯಾವುದೋ ಕಾರಣಕ್ಕಾಗಿ ಇವರಿಬ್ಬರ ಪ್ರೇಮ ಪ್ರಕರಣಕ್ಕೆ ತೆರೆ ಬಿದ್ದಿತು ಎನ್ನಲಾಗಿದೆ. ಇಂದು ಬೆಳಿಗ್ಗೆ ಗಗನ್ ದಿವಾನ್ಸ್ ರಸ್ತೆಯಲ್ಲಿರುವ ಅಶ್ವಿನಿ ಮನೆಗೆ ತೆರಳಿ ಆಕೆಯೊಂದಿಗೆ ಮಾತನಾಡುವ ನಾಟಕವಾಡಿ ಅವಳನ್ನು ಮನೆಯಿಂದ ಹೊರಗೆ ಕರೆದು ಅವಳೊಂದಿಗೆ ಮಾತನಾಡುತ್ತಿದ್ದಂತೆಯೇ ಏಕಾಏಕಿ ಆಕೆಗೆ ಚಾಕುವಿನಿಂದ ಇರಿದ ಎನ್ನಲಾಗಿದೆ. ಈ ಅನೀರಿಕ್ಷಿತ ಘಟನೆನಿಂದ ಭಯಭೀತಳಾದ ಅಶ್ವಿನಿ ತನ್ನನ್ನು ರಕ್ಷಿಸುವಂತೆ ಚೋರಾಗಿ ಕೂಗಿಕೊಂಡಳು. ಅಶ್ವಿನಿಯ ಚೀರಾಟದ ಧ್ವನಿಯನ್ನು ಕೇಳಿದ ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಗಗನ್ ನನ್ನು ಹಿಡಿದು ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಒಪ್ಪಿಸಿದರು.
ಅಶ್ವಿನಿ ಚೂರಿಯ ಇರಿತಕ್ಕೆ ಒಳಗಾದ ಮಾಹಿತಿ ಪಡೆದ ಡಿಸಿಪಿ ಪ್ರಕಾಶ್‍ಗೌಡ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ನಂತರ ಲಕ್ಷ್ಮೀಪುರಂ ಠಾಣೆಗೆ ತೆರಳಿ ಗಗನ್ ಬಗ್ಗೆ ಮಾಹಿತಿ ಸಂಗ್ರಹಿಸಿದರಲ್ಲದೆ ಆತನ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್‍ಗೆ ಸೂಚಿಸಿದರು.
ಗಗನ್‍ನಿಂದ ಚಾಕುವಿನ ಇರಿತಕ್ಕೆ ಒಳಗಾದಿ ಅಶ್ವಿನಿಯನ್ನು ಚಿಕಿತ್ಸೆಗಾಗಿ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆಕೆಯ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಘಟನೆಗೆ ಪ್ರೇಮ ವೈಫಲ್ಯ ಕಾರಣ ಎಂಬ ಶಂಕೆ ಮೂಡಿದ್ದು, ಲಕ್ಷ್ಮೀಪುರಂ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.