ಭಗೀರಥ- ಶಂಕರಾಚಾರ್ಯರ ಜಯಂತಿ ಆಚರಣೆ

ಕೋಲಾರ, ಮೇ:೧೯: ಭಗೀರಥ ಮತ್ತು ಶಂಕರಾಚಾರ್ಯರ ಜಯಂತಿಯನ್ನು ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿಗಳಾದ
ಡಾ.ಆರ್.ಸೆಲ್ವಮಣಿ ಅವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿ, ಕೋವಿಡ್ ಇರುವ ಕಾರಣ ಸರಳ
ರೀತಿಯಲ್ಲಿ ಆಚರಿಸಲಾಗುತ್ತಿದೆ ಎಂದರು.ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷರಾದ ಶಿವಶಂಕರ ಅವರು ಮಾತನಾಡಿ ಉಪ್ಪಾರ ಜನಾಂಗದ ಮೂಲ ಪುರುಷ ಭಗೀರಥ ಮಹರ್ಷಿ ತಪಸ್ಸಿನಿಂದಾಗಿ ಆಕಾಶದ ಗಂಗೆಯನ್ನು ಭೂಮಿಗೆ
ತಂದರು. ಇಂದು ಭೂಮಿಯಲ್ಲಿ ಸಕಲ ಜೀವರಾಶಿಗೂ ನೀರಿನ ಮಹತ್ವ ಗೊತ್ತಾಗಿದೆ. ಅದರಂತೆಯೇ ಸರ್ಕಾರದ ಲಾಕ್ ಡೌನ್ ನಿಯಮಗಳನ್ನು ಪಾಲಿಸಬೇಕು ಇಲ್ಲದಿದ್ದರೆ ಭೂಮಿಯಲ್ಲಿನಮಗೂ ಕಷ್ಟಗಳು ತಪ್ಪಿದ್ದಲ್ಲ ಎಂದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಕುಮಾರ್, ಕಲಾವಿದ ವೆಂಕಟಾಚಲಪತಿ, ಸಿಬ್ಬಂದಿಗಳು ಹಾಜರಿದ್ದರು.