ಭಗೀರಥ ಮಹರ್ಷಿ ಜೀವನ ಪ್ರತಿಯೊಬ್ಬರಿಗೆ ಮಾದರಿ

ಮಾನ್ವಿ,ಏ.೨೭- ಲೋಕ ಕಲ್ಯಾಣಕ್ಕೆ ಗಂಗೆಯನ್ನು ಧರೆಗೆ ತರಲು ನಿರಂತರ ಶ್ರಮವಹಿಸಿ ಯಶಸ್ಸು ಪಡೆದ ಮಹಾತ್ಮ ಮಹರ್ಷಿ ಭಗೀರಥರಾಗಿದ್ದಾರೆ ಅವರ ಆದರ್ಶ ಪ್ರತಿಯೊಬ್ಬರೂ ಮಾದರಿಯಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಬಿ ವಿ ನಾಯಕ ಹೇಳಿದರು.
ಪಟ್ಟಣದ ಬಸವ ವೃತ್ತದಲ್ಲಿ ಭಗೀರಥ ಮಹರ್ಷಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಹರ್ಷಿಗಳ ಜಯಂತಿಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತಾಡಿದ ಅವರು ಮಾತನಾಡಿದ ಅವರು ಭಗೀರಥ ಮಹರ್ಷಿಗಳ ಆದರ್ಶವನ್ನು ನಾವುಗಳು ನಮ್ಮ ಜೀವನದಲ್ಲಿ ಅಳವಡಿಕೊಳ್ಳುವಂತೆ ಹೇಳಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಜಕ್ಕಲದಿನ್ನಿ, ಶರಣಪ್ಪಗೌಡ ನಕ್ಕಂದಿ, ಉಮೇಶ ಸಜ್ಜನ್, ಮಲ್ಲಿಕಾರ್ಜುನ ಸಂಗಾಪೂರು, ವಿರೇಶ ನಾಯಕ, ದೊಡ್ಡಪ್ಪ ಹೂಗಾರ, ಸುರೇಶಗೌಡ, ಶಿವನಗೌಡ ಬ್ಯಾಗವಾಟ, ನಾಗೇಶ ಕಬ್ಬೇರ್,ರಾಮಕೃಷ್ಣ, ಶರಣಯ್ಯ ಸ್ವಾಮಿ, ಬಸವಪ್ರಭು ಜೇಗರಕಲ್, ಚಾಂದ್ ಮುಲ್ಲಾ ಉಪಸ್ಥಿತರಿದ್ದರು.