ಭಗೀರಥ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸುವಂತೆ ಒತ್ತಾಯ

ಸಿರವಾರ.ನ.೧೬- ಶ್ರೀ ಭಗೀರಥ ಸಮಾಜಕ್ಕೆ ಭಗೀರಥ ಭವನ ನಿರ್ಮಾಣ ಮಾಡಲು ಸರ್ಕಾರದ ಸಿ.ಎ ಸೈಟಿನಲ್ಲಿ ಜಾಗವನ್ನು ಕಲ್ಪಿಸಿ ಕೊಡ ಬೇಕು ಎಂದು ಶ್ರೀ ಭಗೀರಥ ಸಮಾಜದ ತಾಲೂಕ ಘಟಕದಿಂದ ತಹಸೀಲ್ದಾರರಿಗೆ ಮನವಿ ಪತ್ರ ನೀಡುವ ಮೂಲಕ ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ನೂತನ ತಾಲೂಕ ಕೇಂದ್ರವಾಗಿರುವ ಸಿರವಾರ ಪಟ್ಟಣದಲ್ಲಿ ಶ್ರೀ ಭಗೀರಥ ಭವನ ನಿರ್ಮಾಣಕ್ಕೆ ಪ.ಪಂಚಾಯತಿಯಲ್ಲಿರುವ ಸಿಎ ನಿವೇಶನವನ್ನು ಸಮಾಜದ ಹೆಸರಿಗೆ ಉಚಿತವಾಗಿ ನೀಡಿದರೆ, ಭಗೀರಥ ಭವನ ನಿರ್ಮಾಣ ಮಾಡಲಾಗುವುದು ಎಂದು ಕೋರಿದ್ದಾರೆ. ಸಮಾಜದ ಅಧ್ಯಕ್ಷರಾದ ಕೆ.ಅಮರೇಶ ಉಪ್ಪಾರ, ಪ್ರಧಾನ ಕಾರ್ಯದರ್ಶಿ ಕೆ,ದೇವರಾಜ ಗುಡಿ, ಸಮಾಜದ ಜಿಲ್ಲಾ ಮಾಜಿ ಅಧ್ಯಕ್ಷರಾದ ಅಂಬರೀಶ ಆದ್ವಾನಿ, ಜಿಲ್ಲಾ ಉಪ್ಪಾರ್ ಸಮಾಜದ ಮುಖಂಡರಾದ ಬುಗ್ಗ ರೆಡ್ಡಿ ರಾಯಚೂರು, ರಾಮಣ್ಣ ಶಿಕ್ಷಕರು, ಅಮರೇಶ ಉಪ್ಪಾರ, ವೆಂಕಟೇಶ ಉಪ್ಪಾರ,ಸಣ್ಣ ವೆಂಕಣ್ಣ ಹೀರಾ. ಬೂದೆಪ್ಪ ಉಪ್ಪಾರ, ಲಕ್ಷ್ಮಣ ಉಪ್ಪಾರ,ನಾಗೇಶ ಉಪ್ಪಾರ, ಶಿವಾನಂದ ನವಲಕಲ್, ಗುಂಡಪ್ಪ ಉಪ್ಪಾರ, ಮಂಜುನಾಥ ಉಪ್ಪಾರ, ನವಲಕಲ್, ವಡವಟಿ ಸೇರಿದಂತೆ ಇನ್ನಿತರರು ಇದ್ದರು.