ಭಗವಾನ ಶ್ರೀ ಸತ್ಯಸಾಯಿ ಬಾಬಾರವರ 95ನೇ ಜಯಂತಿ ಉತ್ಸವ

ಬೀದರ:ನ.22: ನಗರದ ದೇವಿ ಕಾಲೋನಿಯಲ್ಲಿರುವ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದಲ್ಲಿ ಭಗವಾನ ಶ್ರೀ ಸತ್ಯಸಾಯಿ ಬಾಬಾರವರ 95ನೇ ಜಯಂತಿ ಉತ್ಸವವನ್ನು ದಿನಾಂಕ 23-11-2020 ರಂದು ಕರೋನಾ ಮಹಾಮಾರಿ ಪ್ರಯುಕ್ತ ಸರಳವಾಗಿ ಆಚರಿಸಲಾಗುತ್ತಿದ್ದು, ಪ್ರಯುಕ್ತ ದಿನಾಂಕ 23-11-2020 ರಂದು ಬೆಳಿಗ್ಗೆ 5:15 ಗಂಟೆಗೆ ನಗರ ಸಂಕೀರ್ತನೆ, 6:15 ಗಂಟೆಗೆ ಪ್ರಶಾಂತಿ ಧ್ವಜಾರೋಹಣ, ಬೆಳಿಗ್ಗೆ 8:00 ಗಂಟೆಗೆ ಮಹಾರುದ್ರಾಭಿಷೇಕ, ಮುಂಜಾನೆ 11:00 ಗಂಟೆಗೆ ಶ್ರೀ ಸಾಯಿ ಸತ್ಯನಾರಾಯಣ ಕಳಸ ಪೂಜೆ, ಭಜನೆ ಮತ್ತು ಮಹಾ ಮಂಗಳಾರತಿ ಕಾರ್ಯಕ್ರಮಗಳು ಜರುಗುವವು.

ಪ್ರಯುಕ್ತ ಸಕಲ ಸದ್ಭಕ್ತರು ಸದರಿ ಜಯಂತಿ ಕಾರ್ಯಕ್ರಮದಲ್ಲಿ ಕೋವಿಡ್-19 ನಿಯಮಾವಳಿಗಳನ್ನು ಗಮನದಲಿಟ್ಟು ಭಾಗವಹಿಸಲು ಕೋರಲಾಗಿದೆ.