ಭಗವಾನ ವರ್ಧಮಾನ ಮಹಾವೀರರ ಜಯಂತಿ ಸಂಪನ್ನ

ಬೀದರ: ಎ.8: ಬೀದರ ನಗರದಲ್ಲಿ ಭಗವಾನ ವರ್ಧಮಾನ ಮಹಾವೀರರ 2622ನೇ ಜನ್ಮ ಕಲ್ಯಾಣೋತ್ಸವ ಆಚರಣೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬೀದರ ನಗರದ ಶಹಾಗಂಜÀ ಭಾಗದಲ್ಲಿರುವ ಶ್ರೀ 1008 ಚಂದ್ರಪ್ರಭ ದಿಗಂಬರ ಜೈನ ಮಂದಿರದಲ್ಲಿ ಜೈನರ ಇಪ್ಪತ್ನಾಲ್ಕನೆಯ ತೀಥರ್ಂಕರ ಭಗವಾನ ವರ್ಧಮಾನ ಮಹಾವೀರರ 2622ನೇ ಜನ್ಮ ದಿನ ನಿಮಿತ್ಯ ಮುಂಜಾನೆ ಧ್ವಜಾರೋಹಣದೊಂದಿಗೆ ಭಗವಾನ್ ಮಹಾವೀರರ ತೈಲ ಚಿತ್ರದ ಹಾಗೂ ಪಲ್ಲಕ್ಕಿ ಮೇರವಣಿಗೆ ಪ್ರಾರಂಭಗೊಡಿತು..
ವಾದ್ಯವೃಂದ ಹಾಗೂ ಕುಂಬಹೊತ್ತ ಮಹಿಳೆಯರೊಡಗೂಡಿ ಪಂಚರಂಗಿಯ ಧ್ವಜಗಳು, ನೂರಾರು ಶ್ರಾವಕ/ಶ್ರಾವಕಿಯರು ಭಕ್ತಿ ಗೀತೆಗಳನ್ನು ಹಾಡುತ್ತಾ ಮೇರವಣಿಗೆಗೆ ಶೋಭೆ ತಂದುಕೊಟ್ಟರು, ಶಾಹಗಂಜ ಜೈನ ಮಂದಿರದಿಂದ ಶಾಹಗಂಜ ಕಮಾನ, ಗವಾನ ಚೌಕ್, ಚೌಬಾರಾ, ಮಹತ್ಮಾ ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಮುಂದೆ ಡಾ ಬಾಬಾ ಸಾಹೇಬ ಅಂಬೇಡ್ಕರ ವೃತ್ತ ಹಾಯ್ದು ಪುನಃ ಶಾಹಗಂಜ ಜೈನ ಮಂದಿರಕ್ಕೆ ತಲುಪಿತು.
ನಂತರ ಸ್ಥಳೀಯ ಜೈನ ಮಂದಿರದಲ್ಲಿ ಭಗವಾನ ಮಹಾವೀರರ ಪಂಚಾಮೃತ ಮಹಾಭಿಷೇಕ ಹಾಗೂ ತೊಟ್ಟಿಲು ಕಾರ್ಯಕ್ರಮ ಜರುಗಿತು.
ಇದೇ ಸಂದರ್ಭದಲ್ಲಿ ಜಿನೈಕ್ಯರಾದ ಶ್ರವಣಬೆಳಗೋಳದ ಪಿಠಾಧಿಕಾರಿ ಪರಮ ಪೂಜ್ಯ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳಿಗೆ ನೆರೆದ ಜನಸ್ತೊಮದ ಮಧ್ಯ ಶೃದ್ಧಾಂಜಲಿ ಅರ್ಪಿಸಲಾಯಿತು.
ಅನೇಕ ಸ್ಥಳಗಿಳಿಂದ ಭಕ್ತಾಧಿಗಳಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಯಿತು.