ಭಗವಾನ ಮಹಾವೀರ ಜಯಂತಿ ಆಚರಣೆ

ಆಳಂದ: ಏ.22:ಪಟ್ಟಣದಲ್ಲಿ ಅಹಿಂಸಾ ಪರಮೋಧರ್ಮ ಎಂಬ ತತ್ವವನ್ನು ಸಾರುವುದರ ಮೂಲಕ ಜಗತ್ತಿಗೆ ಶಾಂತಿ, ಸಹನೆ, ಸೌರ್ಹಾರ್ದತೆಯನ್ನು ಭೋಧಿಸಿದ ಜೈನ ಧರ್ಮದ 24ನೇಯ ಹಾಗೂ ಕೊನೆಯ ತೀಥರ್ಂಕರ ಭಗವಾನ ಮಹಾವೀರ ಜಯಂತಿ ಜೈನ ಬಸದಿಯಲ್ಲಿ ಆಚರಿಸಲಾಯಿತು. ಪಲ್ಲಕ್ಕಿ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನೇರವೆರಿತು.
ಈ ಸಂದರ್ಭದಲ್ಲಿ ಜೈನ ಸಮಾಜದ ಅಧ್ಯಕ್ಷ ಪಿ.ಎನ್. ಶಹಾ ವಕೀಲರು, ಶೇಖರ ಶಹಾ, ಧನಂಜಯ ಢೋಲೆ, ಶ್ರೇಣಿಕ್ ಕಟಂಬಲೆ, ಪುಷ್ಟಾಕರ್ ಕಟಂ ಬಲೆ, ಮನೋಜ ವಿ .ಶಹಾ, ಉಜ್ವಲಾ ಅತುಲ್ ಶಹಾ, ಕಲ್ಪೇಶ್ ಕಠಾರೆ ವಕೀಲರು, ಧಿರಜ ಯೇಣೆಗುರೆ ಮುಂತಾದವರು ಉಪಸ್ಥಿತರಿದ್ದರು .ರಾಹುಲ್ ವಿ. ಕಟಂಬಲೆ ಅನ್ನಸಂತರ್ಪಣೆ ಮಾಡಿದರು.