ಭಗವಾನ ಮಹಾವೀರರಿಂದ ಲೋಕ ಕಲ್ಯಾಣಕ್ಕಾಗಿ ಜೀವನ ಸಮರ್ಪಣೆ

ಸೈದಾಪುರ:ಎ.5:ಮಹಾವೀರರು ಆತ್ಮ ಕಲ್ಯಾಣಕ್ಕಾಗಿ ಹಾಗೂ ಮಾನವನ ಲೋಕ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿದರು ಎಂದು ಪಾಶ್ರ್ವ ಪದ್ಮಾವತಿ ಗೋಶಾಲೆ ಟ್ರಸ್ಟ್ ಅಧ್ಯಕ್ಷ ಶರಣಿಕ ಕುಮಾರ ದೋಕಾ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಶ್ರೀ ಭಗವಾನ ಮಹಾವೀರರ 2622ನೇ ಜಯಂತಿ ಅಂಗವಾಗಿ ಶ್ರೀ ಭಗವಾನ ಮಾಹವೀರ ಜೈನ್ ಸಂಘದಿಂದ ಸಾರ್ವಜನಿಕರಿಗೆ ಅನ್ನ ಸಂತಾರ್ಪಣೆ ಮಾಡಿ ಮಾತನಾಡಿದರು. ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಮಾನವ ಸಮಾಜಕ್ಕೆ ತೋರಿಸಿಕೊಟ್ಟು ಜಗಕ್ಕೆ ಬೆಳಕಾದ. ಸಾಮರಸ್ಯ, ಸಹಬಾಳ್ವೆ ಸಂದೇಶದ ಮೂಲಕ ಅಂಧಕಾರದಲ್ಲಿ ಮುಳುಗಿದ್ದ ಜನರಿಗೆ ಜ್ಞಾನದ ಅರಿವಿನ ದೀಪವನ್ನು ಹಚ್ಚಿದ. ವಿಶ್ವ ಶಾಂತಿಗಾಗಿ ಹಾಗೂ ಮಾನವ ಕುಲದ ಏಳಿಗೆಗಾಗಿ ಅಹಿಂಸೆಯೆ ಶ್ರೇಷ್ಠ ಧರ್ಮವೆಂದು ಸಾರಿದ. ತ್ಯಾಗ, ಅಹಿಂಸೆ, ಶಾಂತಿ, ಸೌರ್ದತೆಯನ್ನು ಜಗತ್ತಿಗೆ ಬೋಧಿಸಿದ ಮಾಹವೀರರ ಆದರ್ಶಗಳು ನಮಗೆ ದಾರಿದೀಪವಾಗಿವೆ ಎಂದು ಹೇಳಿದರು.

ಜೈನ್ ಸಂಘದಿಂದ ಅನ್ನ ಸಂತಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜೈನ್ ಸಂಘದ ಅಧ್ಯಕ್ಷ ಪ್ರೇಮ ರಾಜ ದೋಕಾ, ರಮೇಶ ಜಿ ಅಭಾಡ, ಅಭಯ ಕುಮಾರ್ ದೋಕಾ, ಕಿಶೋರ್ ಕುಮಾರ ಅಲಿಝಾರ್, ದಿಲೀಪ ಕುಮಾರ ಮೋಮೈಯ್, ಕಿರಣ ಕುಮಾರ ಶಾ, ಹರೀಶ್ ಕುಮಾರ ಅಲಿಝಾರ್, ನರಪತ್ ಸಿಂಗ್ ರಾಜ್ ಪುರೋಹಿತ್, ಮುಕುಂದ ಕುಮಾರ ಅಲಿಝಾರ್, ಮೈಪಾಲ್ ಜೈನ್, ಯೋಗೇಶ ಕುಮಾರ ದೋಕಾ, ಸತೀಶ, ಆನಂದ, ಡಾ. ಪವನ ಕುಮಾರ ಜೈನ್, ಸಂದೀಪ, ಶೀತಲ್, ಲೋಕೇಶ, ಮಿತೇಶ, ಅಕ್ಷಯ, ರಾಹುಲ್, ಮಲ್ಲಿಕಾರ್ಜುನ್ ಗಡದ್, ಯುವಕರು ಸೇರಿದಂತೆ ಇತರರಿದ್ದರು.