ಭಗವಾನ ಬಾಹುಬಲಿಯ ಪ್ರಥಮ ಮಹಾಮಸ್ತಕಾಭಿಷೇಕ

ಮುದ್ದೇಬಿಹಾಳ:ಎ.4: ಮೇ-13 ರಿಂದ 17 ರವೆರೆಗೆ ನಡೆಯುವ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಮುದ್ದೇಬಿಹಾಳ ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಅರಿಹಂತ ಚಾರಿಟೇಬಲ್ ಶಿಕ್ಷಣ ಸಂಸ್ಥೆಯ ಮಹಾವಿದ್ಯಾಲಯದ ಆವರಣದಲ್ಲಿ ಶ್ರೀಮದ್ ದೇವಾದಿದೇವ ಪ್ರಥಮ ತೀರ್ಥಂಕರ 1008 ಶ್ರೀ ಆದಿನಾಥ ಭಗವಾನರ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಹಾಗೂ 1008 ಭಗವಾನ ಶ್ರೀ ಬಾಹುಬಲಿ ಸ್ವಾಮಿಯ ಪ್ರಥಮ ಮಹಾಮಸ್ತಕಾಭಿಷೇಕ ಮಹಾಮಹೋತ್ಸವ ಸಮಾರಂಭವು ದಿಗಂಬರ ಮುನಿ ಸಮ್ಯಕ್ತ ಶಿರೋಮಣಿ ಪರಮಪೂಜ್ಯ ಆಚಾರ್ಯ ಶ್ರೀ 108 ಜ್ಞಾನೇಶ್ವರ ಮುನಿಮಹಾರಾಜರ, ಪರಮಪೂಜ್ಯ ಕ್ಷುಲ್ಲಕ ಶ್ರೀ 105 ಸುಧರ್ಮಗುಪ್ತ ಮಹಾರಾಜರ, ಹೊಂಬುಜ ಮಠದ ಪರಮಪೂಜ್ಯ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚರ್ಯವರ್ಯ ಮಹಾಸ್ವಾಮಿಗಳ ಹಾಗೂ ಪರಮಪೂಜ್ಯ ಸ್ವಸ್ತಿಶ್ರೀ ಭಟ್ಟಾಕಳಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ಸಕಲ ಜೈನ ಸಮಾಜದ ವತಿಯಿಂದ ವೈಭವದಿಂದ ಹಾಗೂ ಸಕಲ ಸಿದ್ದತೆಗಳೊಂದಿಗೆ ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸುವುದರೊಂದಿಗೆ ನೆರವೇರಿಸಲು ಇದೇ ಮೇ-13 ರಿಂದ 17 ರವೆರೆಗೆ ಹಮ್ಮಿಕೊಳ್ಳಲಾಗಿದ್ದು ಕಾರಣ ಎಲ್ಲ ಸಮಾಜ ಭಾಂದವರು ಹಾಗೂ ಭಕ್ತಾಧಿಗಳು ಸಮಾರಂಭದಲ್ಲಿ ಪಾಲ್ಗೊಳ್ಳಬೇಕೆಂದು ಅರಿಹಂತ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷರು ಹಾಗೂ ಪಂಚಕಲ್ಯಾಣ ವ ಮಹಾಮಸ್ತಕಾಭಿಷೇಕ ಮಹೋತ್ಸವದ ಕಾರ್ಯಾಧ್ಯಕ್ಷರಾದ ಮಹಾವೀರ ಸಗರಿ ಸಮಸ್ತ ದಿಗಂಬರ ಜೈನ ಸಮಾಜದ ಪರವಾಗಿ ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.

ನಮ್ಮ ಮುದ್ದೇಬಿಹಾಳದ 1008 ಭಗವಾನ ಶ್ರೀ ಬಾಹುಬಲಿ ಸ್ವಾಮಿಯು ಕರ್ನಾಟಕದಲ್ಲಿಯೇ ಅತೀ ಎತ್ತರವಾದ 6 ನೇಯ ಮೂರ್ತಿಯಾಗಿದ್ದು ಇದನ್ನು ಅಖಂಡ 22 ಅಡಿ ಎತ್ತರದ ವೇದಿಯ ಮೇಲೆ 11 ಅಡಿಯ ಎತ್ತರದ ಮೂರ್ತಿಯು ವಿರಾಜಮಾನವಾಗಿದ್ದು ಮತ್ತು ಇಂತಹ ಮೂರ್ತಿಯು ಶ್ರವಣಬೆಳಗೂಳ, ಕಾರ್ಕಳ, ವೇಣೂರ, ಧರ್ಮಸ್ಥಳ, ಗೊಮ್ಮಟಗಿರಿ ಹಾಗೂ ಕನಕಗಿರಿಯಲ್ಲಿ ಸುಂದರವಾದ ಬಾಹುಬಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು ಇವುಗಳ ಸಾಲಿಗೆ ಕೂಡಾ ನಮ್ಮ ಮುದ್ದೇಬಿಹಾಳದ ಅರಿಹಂತಗಿರಿಯ ಬಿ.ಎಸ್.ಡಬ್ಲ್ಯೂ & ಎಂ.ಎಸ್.ಡಬ್ಲ್ಯೂ ಕಾಲೇಜಿನ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿರುವ ಬಾಹುಬಲಿ ಸ್ವಾಮಿ ಮೂರ್ತಿಯು ಕೂಡಾ ಇತಿಹಾಸಪುಟ ಸೇರುತ್ತಿರುವುದು ಸಂತೋಷವೆನಿಸಿದೆ.
ಮೌಂಜಿ ಬಂಧನಕ್ಕೆ ಹೆಸರು ನೊಂದಣಿ
ದಿನಾಂಕ: 16-05-2021 ರ ಭಗವಾನ ಶ್ರೀ ಬಾಹುಬಲಿ ಸ್ವಾಮಿಯ ರಾಜ್ಯಾಭಿಷೇಕ ದಿನದಂದು ಉಪನಯನ ಕಾರ್ಯಕ್ರಮ ಮಾಡಲು ಗುರು-ಹಿರಿಯರು ನಿಸ್ಚಯಿಸಿದ್ದು ಕಾರಣ ಧರ್ಮಬಂದುಗಳು ತಮ್ಮ ಮಕ್ಕಳ ಹೆಸರನ್ನು ನೊಂದಾಯಿಸಲು ಪಂಚಕಲ್ಯಾಣ ವ ಮಹಾಮಸ್ತಕಾಭಿಷೇಕ ಕಮೀಟಿ ಕಾರ್ಯಾಲಯದಲ್ಲಿ ಅಥವಾ 9448179732 ದೂರವಾಣಿ ಮೂಲಕ ನೊಂದಾಯಿಸಲು ಸೂಚಿಸಿದೆ ಮತ್ತು ಉಪನಯನಕ್ಕೆ ಸಂಬಂಧಪಟ್ಟ ಎಲ್ಲ ಸಾಮಗ್ರಿಗಳನ್ನು ಕಮೀಟಿಯವರು ಒದಗಿಸುವರೆಂದು ಪಂಚಕಲ್ಯಾಣ ವ ಮಹಾಮಸ್ತಕಾಭಿಷೇಕ ಕಮೀಟಿಯ ಕಾರ್ಯಾಧ್ಯಕ್ಷರಾದ ಮಹಾವೀರ ಸಗರಿ ಯವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.