ಭಗವಾನ್ ಹೇಳಿಕೆ ವಿರುದ್ಧ ಒಕ್ಕಲಿಗರ ಸಂಘ ಆಕ್ರೋಶ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಅ.15:- ಒಕ್ಕಲಿಗರು ಸಂಸ್ಕೃತಿ ಹೀನರು ಎಂಬ ಪೆÇ್ರ.ಕೆ.ಎಸ್.ಭಗವಾನ್ ಹೇಳಿಕೆಯ ವಿರುದ್ದ ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷ ನಾಟನಹಳ್ಳಿ ಗಂಗಾಧರ್ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಭಗವಾನ್ ಈಗಾಗಲೇ ಇಂಥಹ ಮಾತನ್ನು ಒಂದುಸಲ ಮಾತನಾಡಿ ಪೆÇಲಿಸ್ ಠಾಣೆಯಲ್ಲಿ ಅವರ ವಿರುದ್ದ ದೂರು ದಾಖಲಾಗಿದ್ದರೂ ಇನ್ನೂ ಬುದ್ದಿಕಲಿಯಲಿಲ್ಲ ಎಂದರೆ ಅವರು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎನಿಸುತ್ತದೆ. ಯಾವುದೇ ಸಮುದಾಯದ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಇಲ್ಲ ಎಂದರೆ ಆ ಸಮುದಾಯದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ದೇಶಕ್ಕೆ ಅನ್ನ ನೀಡುವ ಒಕ್ಕಲಿಗ ಸಮುದಾಯ ಸುಸಂಸ್ಕೃತ ಸಮಾಜವಾಗಿದ್ದು ಸಮಾಜದಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಒಕ್ಕಲಿಗ ಮುನಿದರೆ ನಾಡೇ ಮುನಿಯುತ್ತದೆ ಎಂಬುದು ಅರಿವಿರಲಿ. ನೀವೊಬ್ಬ ಸುಶಿಕ್ಷಿತ ಸಮುದಾಯವನ್ನು ಬೆಂಬಲಿಸುವ ಕೆಲಸ ಮಾಡಬೇಕೇ ವಿನಃ ಸಮುದಾಯವನ್ನು ಹತ್ತಿಕ್ಕುವ ಕೆಲಸ ಮಾಡಬಾರದು. ಪೆÇ್ರ. ಭಗವಾನ್ ಹೇಳಿರುವ ಈ ಮಾತಿಗೆ ಕೂಡಲೇ ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಮುದಾಯದ ಮಹಿಳೆಯರೂ ಸೇರಿದಂತೆ ಉಗ್ರಹೋರಾಟ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ತಾಲ್ಲೂಕು ಉಪಾದ್ಯಕ್ಷ ಬೋರೇಗೌಡ, ಮಹಿಳಾ ಅಧ್ಯಕ್ಷೆ ಪ್ರೇಮನಾಗರಾಜು, ಉಪಾದ್ಯಕ್ಷರ ರೇಣುಕಚಂದ್ರು. ಕರವೇ ಸಂಘಟನಾ ಕಾರ್ಯದರ್ಶಿ ಗೋಪಿಗೌಡ, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಶೀಳನೆರೆ ಭರತ್, ಬಸವೇಗೌಡ, ಗಗನ್‍ಗೌಡ ಸೇರಿದಂತೆ ಹಲವರಿದ್ದರು.