ಭಗವಾನ್ ಮಹಾವೀರ ಜಯಂತಿ : ಜಿಲ್ಲಾಡಳಿತದಿಂದ ಪುಷ್ಪನಮನ


ಬಳ್ಳಾರಿ,ಏ.5-: ಭಗವಾನ್ ಮಹಾವೀರ ಜಯಂತಿ ಅಂಗವಾಗಿ ಜಿಲ್ಲಾಡಳಿತದಿಂದ ಮಂಗಳವಾರ ಭಗವಾನ್ ಮಹಾವೀರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಭಗವಾನ್ ಮಹಾವೀರ ಅವರ 2621 ನೇ ಜಯಂತಿಯನ್ನು ನಗರದ ಡಾ.ರಾಜಕುಮಾರ್ ರಸ್ತೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಸಮುಚ್ಛಯ ಆವರಣದಲ್ಲಿ ಮಂಗಳವಾರದಂದು ಸರಳವಾಗಿ ಆಚರಿಸಲಾಯಿತು.  
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಸುರೇಶ್ ಬಾಬು ಸೇರಿದಂತೆ ಸಮಾಜದ  ಹಲವು ಗಣ್ಯರು, ಮುಖಂಡರು, ಉಪಸ್ಥಿತರಿದ್ದರು.