ಭಗವಾನ್ ಮಹಾವೀರ ಜಯಂತಿ ಆಚರಣೆ

ಗಂಗಾವತಿ ಎ.26: ಸ್ಥಳೀಯ ನಗರಸಭೆ ಕಚೇರಿಯಲ್ಲಿ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮ ಸರಳವಾಗಿ ಆಚರಿಸಲಾಯಿತು.
ಮಹಾವೀರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪೌರಾಯುಕ್ತ ಅರವಿಂದ ಬಿ. ಜಮಖಂಡಿ ಇವರು ಮಾತನಾಡಿ, ಭಗವಾನ ಮಹಾವೀರ ರವರು ಅಹಿಂಸೆಯೇ ಪರಮೋ ಧರ್ಮ ಎಂದು ಭೋದಿಸಿದ್ದು, ಯಾರೂ ಹಿಂಸೆಯನ್ನು ಮಾಡದೇ ಅಹಿಂಸೆಯ ಮಾರ್ಗದಲ್ಲಿ ನಡೆಯುವಂತೆ ಕರೆ ನೀಡಿದರು.
ಈ ವೇಳೆ ನಗರಸಭೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.