ಭಗವಾನ್ ಮಹಾವೀರ ಅವರ ಜಯಂತಿ ಆಚರಣೆ:

ಹೊಸಪೇಟೆ ಏ 25 : ತಾಲ್ಲೂಕು ಕಚೇರಿಯ ವತಿಯಿಂದ ಭಗವಾನ್ ಮಹಾವೀರ ಅವರ ಜಯಂತಿಯನ್ನು ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಭಾನುವಾರದಂದು ಸರಳವಾಗಿ ಆಚರಿಸಲಾಯಿತು.
ಭಗವಾನ್ ಮಹಾವೀರ ಅವರ ಭಾವಚಿತ್ರಕ್ಕೆ ಗ್ರೇಡ್-2 ತಹಶೀಲ್ದಾರರಾದ ಮೇಘನಾ ಅವರು ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕಚೇರಿಯ ಶಿರಸ್ತೇಲ್ದಾರರಾದ ರಮೇಶ್, ಶ್ರೀಧರ್ ಮತ್ತು ಮಂಜುನಾಥ್ ಹಾಗೂ ತಾಲ್ಲೂಕು ಕಚೇರಿಯ ಸಿಬ್ಬಂದಿಗಳು ಮತ್ತು ಸಮಾಜದ ಮುಖಂಡರರು ಜಯಂತಿಯಲ್ಲಿ ಭಾಗವಹಿಸಿದ್ದರು.