
ಕೋಲಾರ.ಮೇ೮:ಜನಸಾಮಾನ್ಯರು ಉದ್ದಾರಕ್ಕಾಗಿ ಬದುಕಿದ ಗೌತಮ ಬುದ್ಧ ಏಷ್ಯಾದ ಬೆಳಕು ಎಂದು ಕರ್ನಾಟಕ ರಾಜ್ಯ ಎಸ್ಸಿ ಎಸ್ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿಯ ಜಿಲ್ಲಾಧ್ಯಕ್ಷ ರಾಮಾಂಜನೇಯ ಬಣ್ಣಿಸಿದರು.
ನಗರದ ಬುದ್ಧ ಮಂದಿರದಲ್ಲಿಂದು ಜಿಲ್ಲಾ ಸಮನ್ವಯ ಸಮಿತಿಯಿಂದ ಅರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ಆಲೋಚನೆಗಳು ನಮ್ಮನ್ನು ರೂಪಿಸುತ್ತವೆ ಎಂದು ಭೋದಿಸಿದ ಭಗವಾನ್ ಬುದ್ಧರನ್ನು ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ ನೆನೆಯುವುದು ನಮ್ಮೆಲ್ಲರ ಕರ್ತವ್ಯ ಆಗಬೇಕು. ಜಗತ್ತು ಕಂಡ ಅಪ್ರತಿಮ ಗುರುಗಳಲ್ಲಿ ಒಬ್ಬರಾದ ಕರುಣೆಯ ಸಾಕಾರ ರೂಪವಾದ ಭಗವಾನ್ ಬುದ್ಧ ನಮ್ಮೆಲ್ಲರ ಸ್ಫೂರ್ತಿಯಂದರು.
ಬುದ್ಧನ ಜನ್ಮದಿನ ಬುದ್ಧ ದಿನ ಎಂದು ಕರೆಯಲ್ಪಡುವ ಈ ದಿನವನ್ನು ಜ್ಞಾನೋದಯದ ದಿನವಾಗಿ ಪೂರ್ವ ಏಷ ದಕ್ಷಿಣ ಏಷದ ಹೆಚ್ಚಿನ ಭಾಗಗಳಲ್ಲಿ ಆಚರಿಸಲಾಗುತ್ತಿದೆ ಎಂದ ಅವರು ಸಂದೇಶ ಮತ್ತು ವಿಚಾರಗಳು ಜನಸಾಮಾನ್ಯರ ಜೀವನಕ್ಕೆ ಸನ್ಮಾರ್ಗವನ್ನು ತೋರುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿಯ ಜಿಲ್ಲಾ ಗೌರವಾಧ್ಯಕ್ಷ ಜಿ ಶ್ರೀನಿವಾಸ್ ವಹಿಸಿದ್ದು, ಪ್ರದಾನ ಕಾರ್ಯದರ್ಶಿ ಮುಕುಂದ, ರಾಜ್ಯ ಸಂಘಟನಾ ಕಾರ್ಯದರ್ಶಿ ಚಂದ್ರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎಸ್.ನಾರಾಯಣಸ್ವಾಮಿ, ಗುಟ್ಟಿಹಳ್ಳಿ ಶಂಕರ್ ನಾರಾಯಣ, ಶರಣಪ್ಪ, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.