ಭಗವಾನ್ ಬುದ್ಧರ ಪ್ರತಿಮೆ ಅನಾವರಣ


ಚಿತ್ರದುರ್ಗ. ಅ.೩೧; ನಗರದ ಸ್ಟೇಡಿಯಂ ಮುಂಭಾಗದಲ್ಲಿ  ಜೈ ಭೀಮ್ ಯುವಕ ಸಂಘ, ಬುದ್ಧ ನಗರ ಇವರು ನಿರ್ಮಿಸಿರುವ ಭಗವಾನ್ ಬುದ್ಧರ ಪ್ರತಿಮೆ ಅನಾವರಣ ಬೆಂಗಳೂರಿನ ಮಹಾಬೂದಿ ಸಂಸ್ಥೆಯ ಪೂಜ್ಯ ಆನಂದ ಬಂತೇಜಿಯವರಿಂದ ನಡೆಯಲಿದೆ. ಪ್ರತಿಮೆ ಉದ್ಘಾಟನೆಯ ನಂತರ ಬುದ್ಧ ಪ್ರತಿಮೆ ಮುಂಭಾಗದಿಂದ ಮದಕರಿನಾಯಕ, ವೀರ ಒನಿತೆ ಓಬವ್ವ, ಅಂಬೇಡ್ಕರ್ ವೃತ್ತಗಳ ಮೂಲಕ ತ.ರಾ.ಸು ರಂಗ ಮಂದಿರಕ್ಕೆ ತಲುಪುವುದು. 
ಮೆರವಣಿಯಲ್ಲಿ ಯಾವುದೇ ರೀತಿಯ ಕರ್ಕಶವಾದ ಘೋಷಣೆ ಇರುವುದಿಲ್ಲ. ಬುದ್ಧಂ ಶರಣಂ, ಗಜ್ಜಾಮಿ ಸ್ತೋತ್ರದೊಂದಿಗೆ ಸಾರೋಟದಲ್ಲಿ ಬುದ್ಧನ ಪ್ರತಿಮೆಯನ್ನು ತರಲಾಗುವುದು.  ತ.ರಾ.ಸು ರಂಗ ಮಂದಿರಲ್ಲಿ ಶ್ರೀ ಕುಮಾರ್ ಮೆಲೋಡಿ ಹಾರ್ಕೆಸ್ಟಾç ಬುದ್ಧ ನಗರ ಚಿತ್ರದುರ್ಗ ಇವರಿಂದ ಬುದ್ಧ ಗೀತೆ ಗಾಯನ ಇರುವುದು, ಒಂದು ಗಂಟೆಗೆ ಪೂಜ್ಯ ಆನಂದ ಬಂತೇಜಿಯವರಿAದ ಬುದ್ಧ ದಮ್ಮ ಪ್ರವಚನ ಹಾಗೂ 101 ಉಪಾಸಕರುಗಳಿಗೆ ಪೂಜ್ಯ ಆನಂದ ಬಂತೇಜಿಯವರು ಬೌದ್ಧ ದಮ್ಮ ದೀಕ್ಷೆ ನೀಡುವುದು. ಈ ಕಾರ್ಯಕ್ರಮಕ್ಕೆ ಬೌದ್ಧ ಆಸಕ್ತರು ನಗರದ ಜನ ಪ್ರತಿನಿಧಿಗಳು, ಧಾರ್ಮಿಕ ಮುಖಂಡರುಗಳು ಮತ್ತು ದಲಿತ ಸಂಘಟನೆಗಳ ಮುಖಂಡರುಗಳು ಭಾಗವಹಿಸಿ ಯಶಸ್ವಿಗೊಳಿಸಲು ಸಂಚಾಲನ ಸಮಿತಿ ಸದಸ್ಯ ಬಿ.ಪಿ.ತಿಪ್ಪೇಸ್ವಾಮಿ ಕೋರಿದ್ದಾರೆ.