
ಚಿಕ್ಕಬಳ್ಳಾಪುರ,ಸೆ.೭-ಭಗವದ್ಗೀತೆ ಒಂದು ವಿಶೇಷವಾದ ಶ್ರೇಷ್ಠ ಗ್ರಂಥ. ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆಯಲ್ಲಿರುವ ವಿಚಾರಧಾರೆಗಳನ್ನು ಭೋಧಿಸಿದನು.ಜನರು ಭಗವದ್ಗೀತೆಯಲ್ಲಿರುವ ತತ್ವದರ್ಶಾಗಳನ್ನು ಮೈಗೂಡಿಸಿಕೊಂಡು ಸತ್ ಪ್ರಜೆಗಳಾಗಿ ಈ ದೇಶವನ್ನು ಸಧೃಡವಾಗಿ ಕಟ್ಟುವುದರಲ್ಲಿ ಅಣಿಯಾಗಬೇಕು. ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ತಿಳಿಸಿದರು.
ಬುಧವಾರ ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾದವ ಕ್ಷೇಮಾಭಿವೃದ್ಧಿ ಸಂಘ ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ಧ“ ಶ್ರೀ ಕೃಷ್ಣ ಜಯಂತಿ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಹೇಳಿದ ಎಲ್ಲ ತತ್ವಪಾಠಗಳೆಲ್ಲವೂ ಇಂದಿಗೂ ಜೀವನದಲ್ಲಿ ಅನುಸರಿಸಬಹುದಾಗಿದೆ.ಅದು ಜೀವನದ ವಿವಿಧ ಆಯಾಮಗಳನ್ನು ಪ್ರಕಟಿಸುತ್ತದೆ.ಕೆಲವು ತತ್ವಪಾಠಗಳನ್ನು ಭಗವದ್ಗೀತೆಯಿಂದ ಪ್ರಮುಖವಾಗಿ ಬರುತ್ತವೆ. ಇತ್ತಿಚಿನ ದಿನಗಳಲ್ಲಿ ಶ್ರೀಕೃಷ್ಣನ ಜಯಂತಿಯನ್ನು ಆಚರಿಸಲು ಸರ್ಕಾರವು ಅಧಿಕೃತವಾಗಿ ಅವಕಾಶವನ್ನು ಕೊಟ್ಟಿದೆ.
ಯಾದವ ಕ್ಷೇಮಾಭಿವೃದ್ಧಿ ಸಂಘದವರು “ಯಾದವ ಶ್ರೀ ಕೃಷ್ಣ ಸಮುದಾಯ ಭವನ ನಿರ್ಮಾಣಕ್ಕೆ ಹಿಂದುಳಿದ ವರ್ಗಗಳ ಇಲಾಖೆಯಿಂದ ಸರ್ಕಾರಿ ಜಾಗ ಕೊಡಬೇಕಾದರೆ ಆ ಸಂಘ ನೊಂದಣಿಯಾಗಿ ಸಂಘದ ಮುಖಾಂತರ ಅರ್ಜಿ ಸಲ್ಲಿಸಬೇಕು. ನಂತರ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಮಂಜೂರಾಗುತ್ತದೆ. ಮತ್ತು ಸಂಘದ ಹೆಸರಿನ ಮೇಲೆ ಬೇಕು ಎಂದರೆ ಮತ್ತೋಮ್ಮೆ ಅದನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಸಲ್ಲಿಸಿ.ಸರ್ಕಾರಕ್ಕೆ ಒಂದಷ್ಟು ಹಣ ಪಾವತಿಸಿದರೆ. ನೇರವಾಗಿ ಸಂಘ ಕಟ್ಟಬಹುದು ನಂತರ ಸಂಘದಲ್ಲಿ ಎಲ್ಲ ಚಟುವಟಿಕೆಗಳನ್ನು ಮಾಡಿಕೊಳ್ಳಲು ಸರ್ಕಾರ ಅವಕಾಶ ಮಾಡಿಕೊಡುತ್ತದೆ. ನಿರ್ಧಾರ ನಿಮಗೆ ಬಿಟ್ಟಿದು ನೀವು ಏನು ನಿರ್ಧಾರವನ್ನು ಹೇಳಿದರೆ ಅದರ ಮೇಲೆ ನಾವು ಕ್ರಮ ತೆಗೆದುಕೊಳ್ಳುತ್ತೆವೆ. ಎಂದು ಹೇಳಿದರು.