ಭಗವದ್ಗೀತೆ: ಜ್ಞಾನ ವಿಜ್ಞಾನ ಯೋಗ

ಸತ್ತೂರು,ಫೆ9: ಪುರಾಣದಲ್ಲಿ, ಶಾಸ್ತ್ರದಲ್ಲಿ ತಿಳಿಸಿದಂತೆ, ಭಗವಂತನ ಮಹಿಮೆ, ಹಿರಿಮೆ ಗರಿಮೆಗಳನ್ನು ತಿಳಿದುಕೊಳ್ಳಲು ಸ್ಥೂಲ ಹಾಗೂ ಸೂಕ್ಷ್ಮವಾದ ಜ್ಞಾನಗಳು ಎರಡು ಪ್ರಕಾರ. ಒಂದು ಸಾಮಾನ್ಯ ಜ್ಞಾನ ಇನ್ನೊಂದು ವಿಶೇಷ ಜ್ಞಾನ. ಭಗವಂತನ ಬಗ್ಗೆ ಶ್ರವಣ ಮನನಾದಿ ಕೀರ್ತನೆಗಳನ್ನು ಮಾಡಿ, ಜಗತ್ತಿನ ಸೃಷ್ಠಿಕರ್ತ ಭಗವಂತ, ಅವನಿಂದಲೇ ಸ್ಥಿತಿ,ಲಯ, ಉತ್ಪತ್ತಿ ಮುಂತಾದವುಗಳು ತಿಳಿದುಕೊಳ್ಳುವುದು ಸಾಮಾನ್ಯ ಜ್ಞಾನ. ಹದಿನಾಲ್ಕು ಲೋಕದಲ್ಲಿ ವ್ಯಾಪ್ತನಾದ,ಬ್ರಹ್ಮಾಂಡದಲ್ಲಿದ್ದ ಪರಮಾತ್ಮ ಪಿಂಡಾಂಡದಲ್ಲಿ, ಎಲ್ಲ ಜಡ ವಸ್ತುಗಳಲ್ಲಿ, ಎಲ್ಲ ಜೀವರಾಶಿಗಳ ಹೃದಯದಲ್ಲಿಯೂ ವ್ಯಾಪ್ತನಾಗಿದ್ದಾನೆ ಎಂದು ಅನುಭವಿಸಿ ತಿಳಿದುಕೊಳ್ಳುವುದು ಅದು ವಿಶೇಷ ಜ್ಞಾನ. ಅಪರೋಕ್ಷ ಜ್ಞಾನ, ಭಗವಂತನ ಸ್ವರೂಪವನ್ನು, ವಿಭೂತಿಯನ್ನು, ವೈಭವವನ್ನು ಆತನ ಮಹಿಮೆಯನ್ನು ಹೇಳುವ ಸ್ವಾಧ್ಯಾಧ್ಯಾಯವೇ 7ನೇ ಅಧ್ಯಾಯ-ಜ್ಞಾನ ವಿಜ್ಞಾನ ಯೋಗ ಎಂದು ಹಿರಿಯ ಪಂ. ವಾದಿರಾಜಾಚಾರ ಮಠದ ಅಭಿಪ್ರಾಯ ವ್ಯಕ್ತಪಡಿಸಿದರು.
ಸತ್ತೂರಿನಲ್ಲಿ ನಡೆದ ಭಗವದ್ಗೀತಾ ಅಭಿಯಾನದ ಸಪ್ತಮೋಧ್ಯಾಯದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ರಘೋತ್ತಮ ಅವಧಾನಿ, ಕೃಷ್ಣ ಹುನಗುಂದ, ಸಂಜೀವ ಗೊಳಸಂಗಿ, ಪ್ರಮೋದ ಶಿರಗುಪ್ಪಿ, ಆನಂದ ದೇಶಪಾಂಡೆ, ರಮೇಶ ಅಣ್ಣಿಗೇರಿ, ಎಸ್.ಎಂ ಜೋಶಿ, ಪೆÇ್ರ.ವಾಮನ ಭಾದ್ರಿ ,ಪ್ರಾಣೇಶ ಮಳಗಿ, ವಿಠ್ಠಲ ಅಂಬೇಕರ, ಹನುಮಂತ ಪುರಾಣಿಕ, ಬದ್ರಿನಾಥ ಬೆಟಗೇರಿ, ಗೋಪಾಲಾಚಾರ್ಯ ಹರಿಹರ, ಪಾಂಡುರಂಗ ಕುಲಕರ್ಣಿ, ಬಹದ್ದೂರ್ ದೇಸಾಯಿ, ವೆಂಕಟೇಶ ಕುಲಕರ್ಣಿ, ಸಂಜೀವ ಜೋಶಿ ಉಪಸ್ಥಿತರಿದ್ದರು.