ಭಗವದ್ಗೀತೆ ಉಳಿದಿರುವುದು ಶಂಕರ ಭಗವತ್ಪಾದರಿಂದ

ಸಂಜೆವಾಣಿ ನ್ಯೂಸ್
ಮೈಸೂರು.ಮೇ.14:- ಶಂಕರ ಜಯಂತಿ ಪ್ರಯುಕ್ತ ರಾಮಕೃಷ್ಣ-ಶಾರದಾದೇವಿ ವಿಪ್ರ ವೃಂದದ ವತಿಯಿಂದ ಶಂಕರ ಮೂರ್ತಿಯ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಗಣಪತಿ ಸಚ್ಚಿದಾನಂದ ಆಶ್ರಮ ಅವಧೂತ ದತ್ತಪೀಠದ ದತ್ತ ವಿಜಯಾನಂದ ಸ್ವಾಮೀಜಿ ರಾಮಕೃಷ್ಣ ಪರಮಹಂಸ ವೃತ್ತದಲ್ಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಗವದ್ಗೀತೆ ಬಗ್ಗೆ ದೇಶದಾದ್ಯಂತ ಅಪವ್ಯಾಖ್ಯಾನ ನಡೆಯುತ್ತಿದ್ದ ಸಂದರ್ಭದಲ್ಲಿ ಅವತರಿಸಿ ಭಗವದ್ಗೀತೆಯ ಸರಿಯಾದ ವಿವರ ನೀಡಿ ಇಂದಿನ ಪೀಳಿಗೆವರೆಗೂ ಭಗವದ್ಗೀತೆ ಉಳಿಸಿದ್ದು ಶಂಕರಾಚಾರ್ಯರು. ಕಾಲ್ನಡಿಗೆಯಲ್ಲಿ ದೇಶ ಪರ್ಯಟನೆ ಮಾಡಿ ಹಿಂದೂ ಧರ್ಮ ಪುನರುತ್ಥಾನಗೊಳಿಸಿದರು. ಇಂದು ರಾಮಾನುಜರು ಅವತರಿಸಿದ ದಿನ ಕೂಡ. ಇಂತಹ ಪುಣ್ಯ ದಿನದಂದು ರಾಮಕೃಷ್ಣ – ಶಾರದಾದೇವಿನಗರ ಭಾಗದಲ್ಲಿ ವಿಪ್ರರು ಒಂದಾಗಿ ಸಮಸ್ತ ಹಿಂದೂಗಳನ್ನು ಒಗ್ಗೂಡಿಸಿ ಧರ್ಮದ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಶಂಕರಾಚಾರ್ಯರ ಮೂರ್ತಿಯೊಂದಿಗೆ ಹರ ಹರ ಶಂಕರ ಜಯ ಜಯ ಶಂಕರ ಘೋಷಣೆಯೊಂದಿಗೆ ಮೆರವಣಿಗೆ ರಾಮಕೃಷ್ಣನಗರದ ಐ ಬ್ಲಾಕ್ ಮುಖ್ಯ ರಸ್ತೆಗಳಲ್ಲಿ ಸಾಗಿ ಶಾರದಾದೇವಿನಗರದ ನಮೋ ಉದ್ಯಾನವನದಲ್ಲಿ ಸಮಾಪ್ತಿಗೊಂಡಿತು. ನಂತರ ವೇದವ್ಯಾಸ ಭಜನಾ ಮಂಡಳಿ, ಶಾರದಾದೇವಿ ಮಹಿಳಾ ಸಮಾಜ, ಶ್ರೀದೇವಿ ಮಹಿಳಾ ಸಮಾಜ ಸೇರಿದಂತೆ ಮಹಿಳಾ ಭಕ್ತರು ಶಂಕರರ ಸ್ತೋತ್ರಗಳ ಪಾರಾಯಣ, ಭಜನೆ ಹಾಡಿದರು. ನಂತರ ಪ್ರಸಾದ ವಿನಿಯೋಗವಾಯಿತು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಕಾಲೇಜಿನ ಮುಖ್ಯಸ್ಥ ಮುರಳಿ, ರಘುರಾಮ್ ವಾಜಪೇಯಿ, ರಾಮಕೃಷ್ಣ-ಶಾರದಾದೇವಿ ವಿಪ್ರ ವೃಂದದ ಅಧ್ಯಕ್ಷ ರಾಕೇಶ್ ಭಟ್, ಗೋಪಾಲ್ ರಾವ್, ಸುಯೋಗ್ ಆಸ್ಪತ್ರೆಯ ಡಾ.ಎಸ್.ಪಿ.ಯೋಗಣ್ಣ, ಬಿಜೆಪಿ ಮುಖಂಡ ಬಿ.ಎಂ.ರಘು, ಯೋಗಾನರಸಿಂಹಸ್ವಾಮಿ ದೇವಸ್ಥಾನದ ಕಾರ್ಯದರ್ಶಿ ಶ್ರೀನಿವಾಸನ್, ಶ್ರೀರಾಮಚಂದ್ರಾಪುರ ಮಠದ ಹವ್ಯಕ ಮಹಾಮಂಡಲದ ಮೈಸೂರು ವಲಯದ ಅಧ್ಯಕ್ಷ ಜಿ.ಆರ್.ಮೋಹನ್, ರಾಮಕೃಷ್ಣ-ಶಾರದಾದೇವಿ ವಿಪ್ರ ವೃಂದದ ಮುಖಂಡರಾದ ಶ್ರೀನಿವಾಸ್ ಪ್ರಸಾದ್, ಎನ್.ವಿ.ನಾಗೇಂದ್ರ ಬಾಬು, ವಿಜಯಾ ಮಂಜುನಾಥ್, ಟಿ.ಎಸ್.ಅರುಣ್, ಆರ್‍ಬಿಐ ದಿನೇಶ್, ಕೃಷ್ಣ ಹೆಗ್ಡೆ, ಶಂಕರನಾರಾಯಣ ಶಾಸ್ತ್ರಿ, ಬಿಜೆಪಿ ಮುಖಂಡರಾದ ಪ್ರತಾಪ್, ಈರೇಗೌಡ, ಚಂದನ್ ಗೌಡ, ದೀಪಕ್, ಕುಮಾರ್, ಬಸವಣ್ಣ, ಶಾರದಾ ತ್ರಿಶಾಖಾ ವಿಪ್ರ ಬಳಗದ ಶ್ರೀಧರ್ ಶರ್ಮಾ, ಅಮಿತ್, ಬ್ರಾಹ್ಮಣ ಯುವ ವೇದಿಕೆಯ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ನಮೋ ಪ್ರತಿಷ್ಠಾನದ ಹೆಚ್.ಜಿ.ರಾಜಮಣಿ, ರಮಾಬಾಯಿ, ರಾಧಾ ಮುತಾಲಿಕ್, ಪದ್ಮ, ಲಲಿತಾ, ತುಳಸಿ, ಕಲಾವತಿ, ಸುಮಾ, ಚಂದ್ರಶೇಖರ ಶೆಟ್ಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.