ಭಗವದ್ಗೀತೆ ಅಭಿಯಾನ


ಸತ್ತೂರು,ಮೇ.6: ಮಹಾಭಾರತ ಭಾರತೀಯ ತತ್ವಶಾಸ್ತ್ರ ಸಾರವಾದರೆ, ಭಗವದ್ಗೀತೆ ಮಹಾಭಾರತದ ಸಾರ. ಪುರುಷೋತ್ತಮ ಯೋಗ, ಅಧ್ಯಾಯವನ್ನು ಅರ್ಥ ಮಾಡಿಕೊಂಡರೆ, ಇಡೀ ಗೀತೆಯನ್ನೇ ಅಷ್ಟೇ ಅಲ್ಲ , ಇಡೀ ಭಾರತೀಯ ತತ್ವಶಾಸ್ತ್ರ ಅರ್ಥ ಮಾಡಿಕೊಂಡಂತೆ. ಶಂಕರಾಚಾರ್ಯರು ಈ ಅಧ್ಯಾಯಕ್ಕೆ ವ್ಯಾಖ್ಯಾನ ಬರೆಯುತ್ತಾ, ಇದು ಕೇವಲ ಗೀತೆಯ ಸಾರ ಅಲ್ಲಾ , ಎಲ್ಲ ಶಾಸ್ತ್ರಗಳು ಏನನ್ನು ಹೇಳುತ್ತೇವೆಯೋ, ಅದೆಲ್ಲವೂ ಈ ಅಧ್ಯಾಯದಲ್ಲಿ ಅಡಗಿದೆ. ಮಧ್ವಾಚಾರ್ಯರು ತಮ್ಮ ಹೆಚ್ಚಿನ ಗ್ರಂಥಗಳಲ್ಲಿ ಈ ಅಧ್ಯಾಯದ ವಿಶೇಷವಾಗಿ ಕೊನೆಯ ನಾಲ್ಕು ಶ್ಲೋಕಗಳನ್ನು ಉಲ್ಲೇಖ ಮಾಡುತ್ತಾರೆ. ಈ ಶ್ಲೋಕಗಳಲ್ಲಿ , ಆಚಾರ್ಯರ ಎಲ್ಲ ಸಿದ್ದಾಂತದ ಸಾರ ಅಡಗಿದೆ ಎಂದು ಡಾ. ಭೀಮಸೇನಾಚಾರ್ಯ ಮಳಗಿಯವರು ತಿಳಿಸಿದರು.
ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ನಡೆದ ಭಗವದ್ಗೀತೆಯ 15 ನೇ ಅಧ್ಯಾಯವಾದ ಪುರುಷೋತ್ತಮ ಯೋಗ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡುತ್ತಾ ಜಗತ್ತು, ಜೀವ ಮತ್ತು ಜಗದೀಶ್ವರನ ಪರಿಚಯ ಹಾಗೂ ಮಹಿಮೆಗಳನ್ನು ವರ್ಣಿಸುವ ಅಧ್ಯಾಯ. ಈ ಅಧ್ಯಾಯವನ್ನು ಪ್ರತಿನಿತ್ಯ ಪಾರಾಯಣ ಮಾಡುವುದರಿಂದ ವಿಶಿಷ್ಟ ಫಲ ಪ್ರಾಪ್ತಿಯಾಗುತ್ತದೆ ಎಂದರು.
ಕಾರ್ಯಕ್ರಮದ ಪೂರ್ವದಲ್ಲಿ, ನಾರಾಯಣಿ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು, ಬಳಗದ ಸದಸ್ಯರಿಂದ ಶ್ರೀ ಹರಿವಾಯು ಗುರುಗಳ ಪಾರಾಯಣ ನಡೆಯಿತು. ಕಾರ್ಯಕ್ರಮದಲ್ಲಿ ಸಂಗೀತ ಕ್ಷೇತ್ರದಲ್ಲಿ ಗಿನ್ನಿಸ ದಾಖಲೆ ಮಾಡಿದ ಪ್ರಸನ್ನ ಗುಡಿಯ ಅವರನ್ನು ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ರಘೋತ್ತಮ ಅವಧಾನಿ, ಕೃಷ್ಣ ಹುನಗುಂದ, ಡಿಕೆ ಜೋಶಿ, ಹನುಮಂತ ಬಿಜಾಪುರ, ವಾಮನ್ ಭಾದ್ರಿ, ಎಂ. ಆರ್ ಕಲಕೋಟಿ, ಹನುಮಂತ ಪುರಾಣಿಕ, ಡಾ. ಶ್ರೀನಾಥ್, ಬದ್ರಿನಾಥ್ ಬೆಟಿಗೇರಿ, ರಾಘವೇಂದ್ರ ಮುಂಡಗೊಡ, ಅನಿಲ ದೇಶಪಾಂಡೆ ,ರವೀಂದ್ರ ದೇಸಾಯಿ, ಸಂಜೀವ ಗೊಳಸಂಗಿ , ಭೀಮಸೇನ ದಿಗ್ಗಾವಿ, ಎಸ್ ಎಂ ಜೋಶಿ, ವಾದಿರಾಜಾಚಾರ, ಪ್ರಮೋದ ಸಿರುಗುಪ್ಪಿ , ಸಂಜೀವ ಜೋಶಿ ,ಸಿ ಕೆ ಕುಲಕರ್ಣಿ, ಪಾಂಡುರಂಗ ಕುಲಕರ್ಣಿ, ಧೀರೇಂದ್ರ ತಂಡಗೊಂಡ, ರವೀಂದ್ರ ದೇಸಾಯಿ, ಆನಂದ ದೇಶಪಾಂಡೆ, ಕೇಶವ ಕುಲಕರ್ಣಿ,ಲಕ್ಷಮೇಶ್ವರ ಹಾಗೂ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.