
ತಾಳಿಕೋಟೆ:ಫೆ.24: ಇಡಿ ವಿಶ್ವದಲ್ಲಿ ಅಡಗಿಕೊಂಡಿರತ್ತಕ್ಕಂತಹ ಮಾನವಕುಲ ಕೋಟಿ ಕೋಟಿ ಭಗವಂತನಿಗೆ ಕೃತಜ್ಞತರಾಗಬೇಕು ಯಾಕೆಂದರೇ ಸೃಷ್ಠಿಯನ್ನೇ ಜಗತ್ತನ್ನು ನಿರ್ಮಾಣ ಮಾಡಿದ ಭಗವಂತನನ್ನು ಮರೆತಿದ್ದೇವೆ ಹಾಗಾಗಬಾರದೆಂದು ಪಡೆಕನೂರ ದಾಸೋಹ ಮಠದ ಶ್ರೀ ಮ.ನಿ.ಪ್ರ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ನುಡಿದರು.
ಗುರುವಾರರಂದು ಶ್ರೀ ಸದ್ಗುರು ಸಾಂಭಪ್ರಭು ಶರಣ ಮುತ್ಯಾರವರ ಜಾತ್ರಾಮಹೋತ್ಸವ ಅಂಗವಾಗಿ ಮಂದಿರದ ಆವರಣದಲ್ಲಿ ಏರ್ಪಡಿಸಲಾದ ಅಲ್ಲಮಪ್ರಭು ದೇವರ ಶೂನ್ಯ ಸಂಪಾದನೆಯ ಆಧ್ಯಾತ್ಮಿಕ ಪ್ರವಚನದ 3ನೇ ದಿನದಂದು ಪ್ರವಚನ ಮುಂದುವರೆಸಿ ಮಾತನಾಡಿತ್ತಿದ್ದ ಅವರು ಯಾರೇ ವ್ಯಕ್ತಿಯಾಗಲಿ ಕಾಲಲ್ಲಿ ನೆಟ್ಟ ಮುಳ್ಳನ್ನು ತೆಗೆದರೆ ಆತನನ್ನು ಕೊಂಡಾಡುತ್ತೇವೆ ಆದರೆ ಭಗವಂತ ಜಗತ್ತನ್ನೇ ನಿರ್ಮಾಣ ಮಾಡಿ ನಮಗೆ ಜೀವಿಸಲು ಅನುವು ಮಾಡಿಕೊಟ್ಟಿದ್ದಾನೆ ಆದರೆ ಭಗವಂತನನ್ನೇ ನೆನೆಸುತ್ತಿಲ್ಲವೆಂದು ವಿಷಾದಿಸಿದರು.
ಶಿವರಾತ್ರಿ ದಿನದಂದು ನೀರನ್ನು ಕುಡಿಯದೇ ಉಪವಾಸ ಗೈಯುವವರಿದ್ದಾರೆ ಅದಕ್ಕೆ ಭಗವಂತನ ಆರಾದನೆ ಎಂದು ಕರೆಯುತ್ತಾರೆ ನಮ್ಮ ಭಾವದಲ್ಲಿ ಕೃತಜ್ಞತೆಯ ಭಾವ ಇರಬೇಕೆಂಬ ಕಾರಣದಿಂದ ಶಿವಯೋಗ ಮಾಡಲಾಗುತ್ತದೆ ಅದಕ್ಕೆ ಉಪವಾಸವೆಂದು ಕರೆಯಲಾಗುತ್ತದೆ. ಉಪವೆಂದರೇ ಸಮೀಪ ಅದಕ್ಕೆ ಉಪನಿಷತ್ತು ಋಷಿಗಳು ವರ್ಣಿಸುತ್ತಾರೆ ಉಪ ಅಂದರೇ ಸಮೀಪ ಆದರೆ ಬೋಗ ಭಾಗ್ಯದಿಂದಲ್ಲ ಭಗವಂತನ ಶ್ರೀ ಪಾದದ ಸಮೀಪ ಇರತಕ್ಕಂತಹದಕ್ಕೆ ಉಪವಾಸವೆಂದು ಕರೆಯುತ್ತಾರೆ. ಹೃದಯ ಅಂತರಾಳದಲ್ಲಿ ಹರಿದಾಡುವ ಮನಸ್ಸನ್ನು ಎಲ್ಲದರಿಂದಲೂ ದೂರಿಕರಿಸಿ ಭಗವಂತನಲ್ಲಿ ಇರುವುದಕ್ಕೆ ಉಪವಾಸವೆನ್ನುತ್ತಾರೆಂದರು.
ಉಪವಾಸ ಮಾಡುವಾಗ ಮನಸ್ಸು ಚಂಚಲ ಮಾಡುತ್ತದೆ ಕಾರಣ ಒಪತ್ತು ಎಂದು ಬಿಸಿಲಿನಲ್ಲೂ ಸಹಿತ ಅಡ್ಡಾಡುವುದಿಲ್ಲ ಇದರಿಂದ ಇಂದ್ರೀಯಗಳು ಶಾಂತವಾಗುತ್ತವೆ. ಇಂದ್ರೀಯಗಳು ಶಾಂತವಾಗುವುದರಿಂದ ಅನುಷ್ಠಾನ ಮಾಡಲಾಗುತ್ತದೆ ಅದಕ್ಕೆ ಉಪವಾಸ ಶಿವಯೋಗವೆಂದು ಕರೆಯುತ್ತಾರೆಂದರು. ಅಂತಹ ಅನುಷ್ಠಾನವನ್ನು ಪುತ್ರ ಸಂತಾನಕ್ಕಾಗಿ ಬನವಾಸಿ ಪ್ರಾಂತ್ಯದ ಶ್ರೇಷ್ಠ ದಂಪತಿಗಳಾದ ಸುಜ್ಞಾನದೇವಿ ಪತಿ ನಿರಹಂಕಾರ ಅವರು ಮಾಡಲು ಪ್ರಾರಂಭಿಸುತ್ತಾರೆ ವ್ರತದ ಸಮಯದಲ್ಲಿ ಅನೇಕ ಕಷ್ಟಗಳೂ ಬಂದರೂ ದೇವನ ಜ್ಞಾನ ಬಿಡುವುದಿಲ್ಲ ತಮಗೆ ಪುತ್ರ ಸಂತಾನ ಭಾಗ್ಯವಾಗಲೆಂಬ ಅಪೇಕ್ಷೆ ಅವರದ್ದಾಗಿರುತ್ತದೆಂದರು.
ಬಾಳಿನಲ್ಲಿ ಮಕ್ಕಳು ಬೇಕು ಮಗುವೆಂದರೇ ಸಂತೋಷದ ಬುಗ್ಗಿ ಆ ಮಗುವಿದ್ದರೆ ತಂದೆ ತಾಯಿಯ ದಣಿವೂ ದೂರಿಕರಿಸುತ್ತದೆ. ಮಕ್ಕಳಿದ್ದರೆ ಮೊಕ್ಷವೆಂಬ ಮಾತು ಸುಳ್ಳು ಮೊಕ್ಷವೆಂಬುದು ದೊರೆಯಲಿಕ್ಕೆ ಶಿವನ ಚಿಂತನೆ ಮಾಡುವುದು ಅಗತ್ಯವಾಗಿದೆ ಎಂದರು. ಜೀವನದಲ್ಲಿ ಚಿಂತೆಯೊಳಗೆ ಹೋದ ಮನುಷ್ಯ ವಿವಿಧ ನಮೂನೆಯ ಚಿಂತೆಗಳನ್ನು ಮಾಡುತ್ತಾ ಕೊನೆಗೆ ಮರಣದ ಚಿಂತೆಗೊಳಗಾಗುತ್ತಾನೆ ಇಂತಹ ಹಗಲು ರಾತ್ರಿ ಚಿಂತೆಯಲ್ಲಿದ್ದ ಮನುಷ್ಯ ಮರವಾಗಿ ನೆರಳು ಮಾಡಿದಂತೆ ಸ್ವಲ್ಪಾದರೂ ದೇವ ಒಲುಮೆಯ ಕಾರ್ಯ ಮಾಡಬೇಕೆಂದರು. ಕಾಮ, ಕ್ರೋದ, ಮದ, ಮತ್ಸರಕ್ಕೆ ಬೆನ್ನು ಹತ್ತುವ ಮನುಷ್ಯ ನಾನು ಯಾರು ಎಂಬುದು ಅರಿತುಕೊಂಡಿಲ್ಲ ಅದನ್ನು ಅರಿತು ಕೊಳ್ಳಬೇಕೆಂದರು. ಹೇಮರೆಡ್ಡಿ ಮಲ್ಲಮ್ಮ ದೇವರ ನೆನಪನ್ನು ಮಾತ್ರಬಿಟ್ಟಿದ್ದಿಲ್ಲ ಆಕೆ ಬಿತ್ತುವ ಬೀಜದ ಗೋಧಿಯನ್ನು ಅಪೇಕ್ಷಿತರಿಗೆ ನೀಡಿ ಕೊನೆಗೆ ದೇವ ಭಕ್ತಿಯಿಂದ ಉಸುಕನ್ನು ಬಿತ್ತಿ ಬೆಳೆ ಬೆಳೆದಿರುವುದು ಮಲ್ಲಿಕಾರ್ಜುನಲ್ಲಿಯ ಭಕ್ತಿಯೇ ಕಾರಣವಾಗಿತ್ತೆಂದರು. ವಿಭೂತಿ ಎಂಬುದು ಎಲ್ಲರೂ ಧರಿಸಬಹುದು. ಅದಕ್ಕೆ ಜಾತಿ ಮತ ಪಂತಗಳಿಲ್ಲ ದಾನಮ್ಮ, ಅಕ್ಕಮಹಾದೇವಿ, ಬಸವಣ್ಣನವರೆಲ್ಲರೂ ವಿಭೂತಿಯನ್ನು ಧರಿಸಿದವರಾಗಿದ್ದಾರೆಂದು ವಿಭೂತಿಯ ಮಹತ್ವ ಕುರಿತು ವಿವರಿಸಿದರು.
ತಾಯಿಯಾದವಳು ಆರು ಗುಣಗಳನ್ನು ಹೊಂದಿರಬೇಕು ರೂಪೇಸುಲಕ್ಷ್ಮೀ, ಬೋಜೆಸುಮಾತಾ, ಕ್ಷಮೇಯಾದರಿತ್ರಿ ಎಂಬ ರಚಿತ ಆರು ಗುಣಗಳನ್ನು ಹೊಂದಿರಬೇಕು. ಅಂತಹ ಗುಣಗಳನ್ನು ಹೊಂದಿದ ದಂಪತಿಗಳೂ ಸುಜ್ಞಾನಿ ಬಿಟ್ಟು ನಿರಹಂಕಾರಿ ಇದ್ದಿದ್ದಿಲ್ಲ, ನಿರಹಂಕಾರಿ ಬಿಟ್ಟು ಸುಜ್ಞಾನಿ ಇದ್ದಿದ್ದಿಲ್ಲ ಆದರೆ ಈ ದಂಪತಿಗಳು ದೇವರಸ್ಮರಣೆ ಮಾತ್ರ ಬಿಟ್ಟಿದಿಲ್ಲ ಅವರಿಗೆ ಧರ್ಮವೆನ್ನುವುದು ಬೆನ್ನು ಹತ್ತಿತ್ತು ಯಾರು ಧರ್ಮಕ್ಕೆ ಬೆನ್ನು ಹತ್ತುತ್ತಾರೋ ಅದು ರಕ್ಷಣೆ ಮಾಡುತ್ತದೆ ಎಂದ ಶ್ರೀಗಳು ಸುಜ್ಞಾನದೇವಿ ಈ ದಂಪತಿಗಳೂ ಪೂಜೆಗೆ ಮುಂದಾದಾಗ ಮಗ್ಗಲಿನ ನದಿಯಲ್ಲಿ ಬೊರ್ಗರೆಯುವ ಸಪ್ಪಳ ಕೇಳಿ ಬರುತ್ತದೆ ಎಂದು ಹೇಳಿದ ಶ್ರೀಗಳು ಪ್ರವಚನವನ್ನು ಮುಂದುವರೆಸುತ್ತಾರೆ.
ಈ ಸಮಯದಲ್ಲಿ ಶ್ರೀ ಶರಣಮುತ್ಯಾರವರ ಮಠದ ಶ್ರೀ ಬಸಣ್ಣ ಶರಣರ, ಶರಣಪ್ಪ ಶರಣರ ಅವರು ನೇತೃತ್ವ ವಹಿಸಿದ್ದರು. ಸಿದ್ದಣ್ಣ ಶರಣರ, ಭೀಮಣ್ಣ ಇಂಗಳಗಿ, ಶರಣಪ್ಪ ದೊರೆ, ಮಲ್ಲಣ್ಣ ಇಂಗಳಗಿ, ಮಲ್ಲಣ್ಣ ಶರಣರ, ಬಸವರಾಜ ಛಾಂದಕೋಟೆ, ಸಂಗಮೇಶ ಶರಣರ, ಗುರುಲಿಂಗಪ್ಪ ದೊಡಮನಿ, ಸುಭಾಸಗೌಡ ಹಳೆಮನಿ ಮೊದಲಾದವರು ಉಪಸ್ಥಿತರಿದ್ದರು.