ಭಗತ್ ಸಿಂಗ್ ಸ್ಕೌಟ್ಸ್, ಕಿತ್ತೂರು ರಾಣಿ ಚೆನ್ನಮ್ಮ ಗೈಡ್ಸ್ ದಳ ಉದ್ಘಾಟನೆ

ಸಂಜೆವಾಣಿ ವಾರ್ತೆಕೊಟ್ಟೂರು, ಆ.10: ಪಟ್ಟಣದ  ಇಂದು ಶಾಲೆಯಲ್ಲಿ ಮಂಗಳವಾರದಂದು ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ದಳವನ್ನು ವಿಜಯನಗರ ಜಿಲ್ಲಾ ಸ್ಕೌಟ್ಸ್ ನ ಕಾರ್ಯದರ್ಶಿ ಮಂಜುನಾಥಪ್ಪ ಉದ್ಘಾಟಿಸಿದರು.ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂದು ಶಾಲೆಯಲ್ಲಿ ಶಿಕ್ಷಣದ ಜೊತೆಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪಠ್ಯೇತರ ಚಟುವಟಿಕೆಗಳು ಅಗತ್ಯ ಹಾಗೂ ಈ ರೀತಿಯಾದ ಶಿಸ್ತು ದೇಶ ಪ್ರೇಮ ಮತ್ತು ಸಾಮಾಜಿಕ ಬದ್ಧತೆಯನ್ನು ಮಕ್ಕಳಲ್ಲಿ ಬೆಳೆಸುವಲ್ಲಿ ಈ ಭಾರತೀಯ ಸ್ಕೌಟ್ಸ್ ಅಂಡ್ ಗೈಡ್ಸ್ ಪ್ರೇರಣೆಯಾಗಿದೆ ಎಂದು ತಿಳಿಸಿದರು.ಬಳ್ಳಾರಿ ಜಿಲ್ಲಾ ಸ್ಕೌಟ್ಸ್ ತರಬೇತಿ ಆಯುಕ್ತರಾದ ನಾಗರಾಜರವರು ಮಕ್ಕಳಿಗೆ ದೀಕ್ಷಾ ಕಾರ್ಯಕ್ರಮವನ್ನು ಮಾಡುವ ಮೂಲಕ ಭಾರತೀಯ ಸ್ಕೌಟ್ಸ್ ಅಂಡ್ ಗೈಡ್ಸ್ ನ ಮಕ್ಕಳಿಗೆ ಪರಿಚಯಿಸಲಾಯಿತು.ಈ ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲಾ ಪ್ರತಿನಿಧಿ ಶಿವಪುತ್ರ, ಹಗರಿಬೊಮ್ಮನಹಳ್ಳಿ ಸ್ಕೌಟ್ಸ್ ಮಾಸ್ಟರ್ ಮಹಾಲಿಂಗಪ್ಪ, ಎಸ್.ಜಿ.ವಿ. ಸಾಂಗ್ಲಿಯವರು, ವಾಗೀಶ, ಇಂದು ಶಾಲೆಯ ಸ್ಕೌಟ್ಸ್ ಮಾಸ್ಟರ್ ವೀರಭದ್ರಗೌಡ ಮತ್ತು ಸರ್ವಸಿಬ್ಬಂದಿ ಹಾಜರಿದ್ದರು.