ಭಗತ್ ಸಿಂಗ್ ಜನ್ಮದಿನ ಮೋದಿ ನಮನ

ನವದೆಹಲಿ,ಸೆ.೨೮-ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನ ಸಲ್ಲಿಸಿದರು.
ಭಗತ್ ಸಿಂಗ್ ಅವರು ಎಂದಿಗೂ ನ್ಯಾಯ ಮತ್ತು ಸ್ವಾತಂತ್ರ್ಯಕ್ಕಾಗಿ ಭಾರತದ ಅವಿರತ ಹೋರಾಟದ ಸಂಕೇತವಾಗಿರುತ್ತಾರೆ ಎಂದು ಹೇಳಿದರು.
ಶಹೀದ್ ಭಗತ್ ಸಿಂಗ್ ಅವರ ಜನ್ಮದಿನದಂದು ಅವರನ್ನು ಸ್ಮರಿಸುತ್ತಿದ್ದೇನೆ. ಅವರ ತ್ಯಾಗ ಮತ್ತು ಭಾರತದ ಸ್ವಾತಂತ್ರ್ಯದ ಕಾರಣಕ್ಕಾಗಿ ಅಚಲವಾದ ಸಮರ್ಪಣೆ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ. ಧೈರ್ಯದ ದಾರಿದೀಪ, ಅವರು ನ್ಯಾಯ ಮತ್ತು ಸ್ವಾತಂತ್ರ್ಯಕ್ಕಾಗಿ ಭಾರತದ ನಿರಂತರ ಹೋರಾಟದ ಸಂಕೇತವಾಗಿದ್ದಾರೆ ಎಂದು ಮೋದಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಭಗತ್ ಸಿಂಗ್ ಅವರು ತಮ್ಮ ೨೩ ನೇ ವಯಸ್ಸಿನಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಜಿಸಿದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು. ಇಂದು ಸೆಪ್ಟೆಂಬರ್ ೨೮, ಅವರ ೧೧೬ ನೇ ಜನ್ಮದಿನವನ್ನು ಭಾರತದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.
ಭಗತ್ ಸಿಂಗ್ ಅವರನ್ನು ೧೯೩೧ ರಲ್ಲಿ ಬ್ರಿಟಿಷರು ೨೩ ನೇ ವಯಸ್ಸಿನಲ್ಲಿ ಗಲ್ಲಿಗೇರಿಸಿದರು.
ಜನರನ್ನು ಕೊಲ್ಲಬಹುದು, ಅವರ ಆಲೋಚನೆಗಳಲ್ಲ. ಭಾರತದ ಅನರ್ಹ ಕ್ರಾಂತಿಕಾರಿ ರತ್ನ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನದಂದು ಶತ ಶತ ನಮನಗಳು ಎಂದು ವಿ.ಸೋಮಣ್ಣ ಜಾಲ ತಾಣಗಳಲ್ಲಿ ಹೇಳಿದ್ದಾರೆ.
ಮಾಜಿ ಸಚಿವ ಬಿ.ಶ್ರೀರಾಮುಲು ಟ್ವೀಟ್: ಭಾರತೀಯ ಸ್ವಾತಂತ್ರ್ಯ ಚಳವಳಿಯ ಅಪ್ರತಿಮ ರತ್ನ ಭಗತ್ ಸಿಂಗ್ ಅವರ ಶೌರ್ಯವು ಎಲ್ಲಾ ಪೀಳಿಗೆಗೆ ಸ್ಫೂರ್ತಿಯಾಗಿದೆ. ಭಾರತಾಂಬೆಯ ಹೆಮ್ಮೆಯ ಪುತ್ರ ಭಗತ್ ಸಿಂಗ್ ಜನ್ಮದಿನದಂದು ಪ್ರಣಾಮಗಳು ಎಂದಿದ್ದಾರೆ. ಜೊತೆಗೆ, ಭಾರತಾಂಬೆಯ ಹೆಮ್ಮೆಯ ಪುತ್ರ ಭಗತ್ ಸಿಂಗ್ ಅವರ ಜನ್ಮದಿನದಂದು ಶುಭಾಶಯಗಳು ಎಂದು ಪ್ರತಾಪ್ ಸಿಂಹ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಅನೇಕ ಗಣ್ಯರು ಶುಭಾಶಯಗಳು ಜಾಲತಾಣದಲ್ಲಿ ಹರಿದು ಬರುತ್ತಿದೆ.