ಭಗತ್‍ಸಿಂಗ್ ವೃತ್ತದಲ್ಲಿ ಹುತಾತ್ಮರ ದಿನ

ಬೀದರ:ಮಾ 23: ಇಂದು ನಗರದ ಭಗತಸಿಂಗ್ ವೃತ್ತದಲ್ಲಿ ರಾಷ್ಟ್ರೀಯ ಕ್ರಾಂತಿಕಾರಿ ನಾಯಕರಾಗಿದ್ದ ವೀರ ಭಗತಸಿಂಗ್, ಸುಖದೇವ ಹಾಗೂ ರಾಜಗುರು ಅವರ ಹುತಾತ್ಮ ದಿನಾಚರಣೆ ಜರುಗಿತು.

ಫುಲಾರಿ ಜನತಾ ಬಜಾರ್ ಅಸೋಶಿಯಶನ್ ಹಾಗೂ ವಿಶ್ವ ಶಾಂತಿ ದಿವ್ಯ ಪೀಠಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕøತ ಓಂಪ್ರಕಾಶ ರೊಟ್ಟೆ ಮಾತನಾಡಿ, 1931ರಂದು ಬ್ರಿಟಿಷg ಗುಂಡೇಟಿಗೆ ಶಹಿದ್‍ರಾದ ಈ ಮೂರು ಜನ ಕ್ರಾಂತಿವೀರರ ಪುಣ್ಯಸ್ಮರೋತ್ಸವವನ್ನು ರಾಷ್ಟ್ರೀಯ ಹುತಾತ್ಮರ ದಿನ ಎಂದು ಕೇಂದ್ರ ಸರ್ಕಾರ ಕೂಡಲೇ ಘೋಷಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಲಾಡಗೆರಿ ಹಿರೇಮಠ ಷ, ಭ್ರ ಗಂಗಾಧರ ಶಿವಾಚಾರ್ಯರು ರಾಷ್ಟ್ರೀಯ ದ್ವಜ ಹಾರಿಸುವ ಮೂಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹೂಗಾರ ಸಮಾಜದ ಜಿಲ್ಲಾಧ್ಯಕ್ಷ ಸಿದ್ದಪ್ಪ ಫುಲಾರಿ ಅಧ್ಯಕ್ಷತೆ ವಹಿಸಿದ್ದರು.

ಸಾಹಿತಿ ರಮೇಶ ಬಿರಾದಾರ, ಶ್ರೀ ರೇಣುಕ ಮಾಹೇಶ್ವರ ಸೌಹಾರ್ದ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಶ್ರೀಕಾಂತ ಸ್ವಾಮಿ ಸೋಲಪೂರ, ಓಂಪ್ರಕಾಶ್ ಧಡ್ಡೆ, ವಿರಶೆಟ್ಟಿ ಪಾಟೀಲ, ಬಾಲಾಜಿ ಮಡಿವಾಳ, ಕೊತಂಬರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವೈಜಿನಾಥ ಪಾಟೀಲ ಸ್ವಾಗತ ಕೋರಿದರು ಸಂತೋಷ ಮಂಗಳುರೆ ವಂದಿಸಿದರು.