ಭಗತ್‍ಸಿಂಗ್ ಅವರ ದೇಶ ಪ್ರೇಮ ಬೆಳೆಸಿಕೊಳ್ಳಿ

ಕಲಬುರಗಿ:ಮಾ.24:ಭಗತಸಿಂಗ್ ಅವರ ಜೀವನ ಚರಿತ್ರೆಯನ್ನು ಹಾಗೂ ಅವರಲ್ಲಿರುವ ದೇಶ ಪ್ರೇಮವನ್ನು ಇಂದಿನ ಯುವಕರಿಗೆ ತಿಳಿಸುವಂತಹ ಕೆಲಸವಾಗಬೇಕೆಂದು ಸ್ವಾತಂತ್ರೃ ಹೋರಾಟಗಾರ ದಿ.ವಿದ್ಯಾಧರ ಗುರೂಜಿ ಅವರ ಸುಪುತ್ರ ದೇಶ ಪ್ರೇಮಿ, ಹಿತ ಚಿಂತಕ ಅಶೋಕ ಗುರೂಜಿ ಹೇಳಿದರು.

ಅವರು ನಗರದ ರಾಮ ಮಂದಿರ ಯೋಗ ಕೇಂದ್ರದಲ್ಲಿ ಆಯೋಜಿಸಿದ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಭಗತಸಿಂಗ್ ಅವರ ತ್ಯಾಗ ಬಲಿದಾನದ ಅವರ ಜೀವನ ಚರಿತ್ರೆ ಹಾಗೂ ಅವರಿಗಿರುವ ದೇಶ ಪ್ರೇಮವನ್ನು ಹಾಗೂ ಅಂದಿನ ನಮ್ಮ ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರೃವನ್ನು ಹೇಗೆ ಉಳಿಸಿ ಅದನ್ನು ಅರ್ಥಪೂರ್ಣವಾಗಿ ಬಾಳಬೇಕೆಂಬುದನ್ನು ತಿಳಿಸಕೊಡುವುದು ಇಂದಿನ ಶಿಕ್ಷಕರ ಹಾಗೂ ಪಾಲಕರ ಕರ್ತವ್ಯವಾಗಿದೆ ಎಂದು ಹೇಳಿದರು.

ಜಲಿಯಾನ್‍ವಾಲ್ ಭಾಗ್ ಘಟನೆ ನಂತರ ಅಧಿವೇಶನದಲ್ಲಿ ಸ್ಪೀಕರ್ ಹಿಂದಿನ ಗೋಡೆಗೆ ಬಾಂಬ್ ಸ್ಪೋಟಿಸಿ, ಬಿಟಿಷರ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರಂಗವಾಗಿ ಅವರನ್ನು ಬಂದಿಸಿ ಗಲ್ಲು ಶಿಕ್ಷೆ ತೀರ್ಪು ನೀಡಲಾಯಿತು.

ಗಲ್ಲು ಶಿಕ್ಷೆ ವಿಧಿಸುವ ಹಿಂದಿನ ದಿನ ಭಗತಸಿಂಗ್‍ರ ವಕೀಲ್ ಮೇಹ್ತಾ ಅವರು ಭೇಟಿ ನೀಡಿದಾಗ ದೇಶಕ್ಕೆ ಏನು ಹೇಳುತ್ತಿರಿ ಎಂದಾಗ ಸಾಮ್ರಾಜ್ಯಶಾಹಿಗೆ ದಿಕ್ಕಾರ, ಕ್ರಾಂತಿ ಚಿರಾಯುವಾಗಲಿ ಎಂದು ಹೇಳಿದರು. ಮತ್ತೇನಾದರು ಆಸೆಯಿದೆ ಎಂದು ಕೇಳಿದಾಗ ಮತ್ತೇ ಈ ದೇಶದಲ್ಲಿ ಹುಟ್ಟುವ ಆಸೆಯಿದೆ ಮತ್ತೆ ಹುಟ್ಟಿದರೆ ಈ ದೇಶ ಸೇವೆ ಮಾಡಬಹುದು ಎಂದುತ್ತರಿಸಿದರು ಎಂದು ಹೇಳಿದರು.

ಪತಂಜಲಿ ಯೋಗ ಸಮಿತಿ ಭಾರತ ಸ್ವಾಭಿಮಾನ ಟ್ರಸ್ಟ್ ಜಿಲ್ಲಾಧ್ಯಕ್ಷ ಶಿವಾನಂದ ಸಾಲಿಮಠ ಮಾತನಾಡಿ, ಈ ಹುತಾತ್ಮ ದಿನಾಚರಣೆ ನಿಮಿತ್ತ ನಾವು ಸತತ ಒಂದು ತಿಂಗಳ ಕಾಲ ಕಲಬುರಗಿ ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿ ಯೋಗ ಶಿಬಿರ ನಡೆಸುವುದು ಹಾಗೂ ದೇಶ ಪ್ರೇಮವನ್ನು ಬೆಳಸುವ ಸಂಕಲ್ಪ ಮಾಡಬೇಕೆಂದು ಹೇಳಿದರು.

ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಮಚೇಂದ್ರನಾತ ಮುಲಗೆ, ಮಹಿಳಾ ಪ್ರಭಾರಿ ಸುಮಂಗಲಾ ಚಕ್ರವರ್ತಿ ಮಾತನಾಡಿದರು. ಕಿಸಾನ ಸೇವಾ ಸಮಿತಿ ಅಧ್ಯಕ್ಷ ರಮೇಶ ಮಹೇಂದ್ರಕರ್, ರಾಮ ಮಂದಿರ ಕೇಂದ್ರದ ಮುಖ್ಯ ಯೋಗ ಶಿಕ್ಷಕ ಉಮೇಶ ಗೊಡಬೊಲೆ ವೇದಿಕೆ ಮೆಲ್ಲಿದ್ದರು. ಯುವ ಭಾರತ ಪ್ರಭಾರಿ ಸಿದ್ದಯ್ಯ ಗುತ್ತೇದಾರ ಯೋಗ ತರಬೇತಿ ನೀಡಿದರು. ಮಹಾದೇವಿ ಕಬಡಿ ಪ್ರಾರ್ಥಿಸಿದರು. ದಾಮೋದರ ಕುಲಕರ್ಣಿ ಸ್ವಾಗತಿಸಿದರು, ಶರಣು ಉದನೂರ ನಿರೂಪಣೆ ಮಾಡಿದರು. ಜಯಶ್ರೀ ಹರವಾಳ ವಂದಿಸಿದರು. ವಿವಿಧ ಬಡಾವಣೆಗಳಿಂದ ಯೋಗ ಶಿಕ್ಷಕರು, ಪದಾಧಿಕಾರಿಗಳು, ಸಾಧಕರು ಆಗಮಿಸಿದ್ದರು. ಹನುಮಾನ ಸಿಂಗ ಠಾಕೂರ, ಘನಶಾಮ ಗುತ್ತೇದಾರ, ಶಿವರಾಜ ನಾವದಗಿ, ಗುರುನಾಥ ಪಾಟೀಲ್, ಬಸವರಾಜ ಕೊಳ್ಳೂರ, ಬಾಬುರಾವ ಜಾಧವ್, ರಾಮಕೃಷ್ಣ ಕೆದ್ಲಾಯಿ, ಎಲ್.ಡಿ.ದೇಶಪಾಂಡೆ, ಬಸವರಾಜ ಕಪಾಟೆ, ಕಾವೇರಿ ಪಾಟೀಲ್, ಇಂದುಮತಿ ರಡ್ಡಿ, ಇಂದಿರಾ ರಠೋಡ, ಕವಿತಾ, ವಿಜಯಲಕ್ಷ್ಮೀ ಕಪ್ಪರ ಸೇರಿ ಇತರರಿದ್ದರು.