ಭಗತಸಿಂಗ್, ಸುಖದೇವ, ರಾಜಗುರು ಸ್ವಾತಂತ್ರ್ಯ ಹೋರಾಟದ ತ್ರಿರತ್ನಗಳು

ಕಲಬುರಗಿ:ಮಾ.24: ಭಗತಸಿಂಗ್, ಸುಖದೇವ ಮತ್ತು ರಾಜಗುರು ಅವರು ಬ್ರಿಟೀಷರನ್ನು ಭಾರತದಿಂದ ಹೊಡೆದೋಡಿಸಿ, ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ನೀಡುವಲ್ಲಿ ಸಾಕಷ್ಟು ಪ್ರಯತ್ನಿಸಿದ್ದಾರೆ.ಅದಕ್ಕಾಗಿ ಬಾಲ್ಯದಲ್ಲಿಯೇ ನೇಣುಗಂಬ ಏರಿದ ಇವರು ಸ್ವಾತಂತ್ರ್ಯ ಹೋರಾಟದ ತ್ರಿರತ್ನಗಳಿದ್ದಂತೆಯೆಂದು ಪ್ರಾಂಶುಪಾಲ ಮಹ್ಮದ್ ಅಲ್ಲಾವುದ್ದೀನ ಸಾಗರ ಅಭಿಪ್ರಾಯಪಟ್ಟರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಭಗತಸಿಂಗ, ಸುಖದೇವ ಮತ್ತು ರಾಜಗುರು ಅವರ ಹುತಾತ್ಮರಾದ ದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ನಮಗಳನ್ನು ಸಲ್ಲಿಸಿ ಅವರು ಮಾತನಾಡಿದರು.
ಉಪನ್ಯಾಸಕಿ ಚಂದ್ರಪ್ರಭ ಕಮಲಾಪುರಕರ್ ಮಾತನಾಡಿ, ಬ್ರಿಟಿಷರಿಗೆ ಸಿಂಹ ಸ್ವಪ್ನರಾಗಿ ಕಾಡಿದ್ದ ಭಗತಸಿಂಗ, ಸುಖದೇವ ಮತ್ತು ರಾಜಗುರು ಅಪ್ಪಟ ದೇಶಭಕ್ತರಾಗಿದ್ದಾರೆ. ಅವರಲ್ಲಿರುವ ದೇಶಪ್ರೇಮ ಇಂದಿನ ಯುವ ಜನತೆ ಅಳವಡಿಸಿಕೊಂಡು ದೇಶಸೇವೆ ಮಾಡಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರವೀಂದ್ರಕುಮಾರ ಬಟಗೇರಿ, ಎಚ್.ಬಿ.ಪಾಟೀಲ, ಶಂಕ್ರೆಪ್ಪ ಹೊಸದೊಡ್ಡಿ, ಮಂಜುನಾಥ ಎ.ಎಂ., ಪ್ರಕಾಶ ಪಾಟೀಲ, ವಿದ್ಯಾರ್ಥಿ ಪ್ರತಿನಿಧಿ ಮುತ್ತಣ್ಣ, ಪ್ರಮುಖ ವಿದ್ಯಾರ್ಥಿಗಳಾದ ಬಾಬುರಾಯ, ಮಲ್ಲಿಕಾರ್ಜುನ, ಶಿವರಾಯಪ್ಪ, ವಿನೋದ, ಸಂಗೀತಾ, ವಿಶಾಲು, ಸಾನಿಯಾ ಸೇರಿದಂತೆ ಮತ್ತಿತರರಿದ್ದರು.