
ಜೇವರ್ಗಿ:ಸೆ.1: ತಾಲ್ಲೂಕಿನ ಸೊನ್ನ ಗ್ರಾಮದ ವಿರಕ್ತಮಠದ ಆವರಣದಲ್ಲಿ ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಕಲಬುರಗಿ ಹಾಗೂ ವಿಜಯಪುರ ಮಾಕಾ ಪರಿವಾರದ ವತಿಯಿಂದ ನಿರ್ಮಿಸಿದ ಭಕ್ತ ನಿವಾಸ (ಯಾತ್ರಿ ನಿವಾಸ) ಉದ್ಘಾಟನೆಯನ್ನು ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ದ ರಾಜಯೋಗಿಂದ್ರ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಲೋಕಾರ್ಪಣೆಗೊಳಿಸಲಾಯಿತು.
ಈ ಸಂಧರ್ಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಜಗದ್ಗುರುಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಜೇವರ್ಗಿ ತಾಲ್ಲೂಕಿನ ಸೊನ್ನದ ಸಿದ್ದಲಿಂಗೇಶ್ವರ ವಿರಕ್ತಮಠವು ಅಪಾರ ಭಕ್ತ ವೃಂದವನ್ನು ಹೊಂದಿದ್ದು ಅನ್ನ ದಾಸೋಹದ ಜೊತೆಗೆ ಅಕ್ಷರ ದಾಸೋಹದ ಮೂಲಕ ಸಾವಿರಾರು ಅಂಧ ಅನಾಥ,ನಿರ್ಗತಿಕ ಮಕ್ಕಳಿಗೆ ಉಚಿತ ವಸತಿ ಹಾಗೂ ಶಿಕ್ಷಣವನ್ನು ನೀಡುತ್ತಾ ಸಮಾಜದಲ್ಲಿ ಉತ್ತಮ ನಾಗರೀಕರನ್ನಾಗಿ ಮಾಡುತ್ತಿರುವ ನಮ್ಮ ಭಾಗದ ಎರಡನೇ ಸಿದ್ದಗಂಗಾ ಮಠವೆಂದು ಪ್ರಖ್ಯಾತವಾಗಿದೆ. ಅದೇ ರೀತಿ ದಿನಾಲು ನೂರಾರೂ ಭಕ್ತರು ಮಠಕ್ಕೆ ಭೇಟಿ ನೀಡುತ್ತಾರೆ ಬಂದ ಭಕ್ತರಿಗೆ ವಸತಿ ಇರುವುದರಿಂದ ಮಠದ ಭಕ್ತರಾದ ಮಾಕಾ ಪರಿವಾರದವರು ಹತ್ತು ಕೋಣೆಗಳ ಸುಸಜ್ಜಿತವಾದ ಯಾತ್ರಿ ನಿವಾಸ ನಿರ್ಮಿಸಿದ್ದು ಅತ್ಯಂತ ಶ್ಲಾಘನೀಯ ಕೆಲಸ, ಸಂತೋಷದ ವಿಷಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀಶೈಲ ಜಗದ್ಗುರು ಪೂಜ್ಯ ಡಾ. ಸಾರಂಗ ದೇಸಿಕೇಂದ್ರ ಮಹಾಸ್ವಾಮಿಗಳು, ಸೊನ್ನ ಮಠದ ಪೂಜ್ಯ ಡಾ. ಶಿವಾನಂದ ಮಹಾಸ್ವಾಮಿಗಳು, ನೆಲೋಗಿ ವಿರಕ್ತಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು, ಯಡ್ರಾಮಿ ಮಠದ ಪೂಜ್ಯ ಸಿದ್ದಲಿಂಗ ಸ್ವಾಮಿಗಳು, ಮಠದ ಭಕ್ತರಾದ ಲಕ್ಷ್ಮೀ ಕಿರಣ ಮಾಕಾ, ನಾಗಮ್ಮ ಮಾಕಾ, ಸಿದ್ರಾಮಪ್ಪ ಮಾಕಾ, ಸೋಮಶೇಖರ ಮಾಕಾ, ಶಿವಾನಂದ ಮಾಕಾ, ವಿಜಯಕುಮಾರ ಬಿರಾದಾರ, ಶಿವಲಿಂಗಪ್ಪ ಮುಧೋಳ, ಮಲ್ಲಿಕಾರ್ಜುನ ಬಿರಾದಾರ, ಕಲ್ಲಯ್ಯ ಸ್ವಾಮಿ, ಶಿವಲಿಂಗಪ್ಪ ಅಕ್ಕಿ ಸೇರಿದಂತೆ ಸೊನ್ನ, ವಸ್ತಾರಿ, ಘತ್ತರಗಿ, ನೆಲೋಗಿ, ಕಲ್ಲಹಂಗರಗಾ ಸೇರಿದಂತೆ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು