ಭಕ್ತ ಕುಂಬಾರನ ಮುಡಿಗೇರಿತು ಗೌರವ ಡಾಕ್ಟರೇಟ್

ಕಲಬುರಗಿ,ಜು.31-ತಮಿಳುನಾಡಿನ ಹೊಸೂರಿನ ಕೇಂದ್ರದಲ್ಲಿ ಅಮೇರಿಕ ದೇಶದ ಏಶಿಯಾ ಕಲ್ಚರಲ್ ಸಂಶೋಧನಾ ವಿಶ್ವ ವಿದ್ಯಾಲಯದ ವತಿಯಿಂದ ಕನ್ನಡದ ಖ್ಯಾತ ನಿರೂಪಕ ಎಸ್.ಎಮ್.ಭಕ್ತ ಕುಂಬಾರ ಅವರಿಗೆ ಗೌವರ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಾವಿರ ಕಾರ್ಯಕ್ರಮಗಳ ಸರದಾರ ಎಂದೇ ಖ್ಯಾತಿ ಪಡೆದಿರುವ ಜಾನಪದ ಕಲಾವಿದ, ಯಕ್ಷಿಣಿ ಕಲಾವಿದ. ಸುಮಾರು ಒಂದುವರೆ ದಶಕದಿಂದ ಭಕ್ತ ಕುಂಬಾರರವರು ಆಡು ಮುಟ್ಟದ ಸೊಪ್ಪು ಇಲ್ಲ ಭಕ್ತ ಕುಂಬಾರ ರವರು ಮಾಡದೆ ಇರುವ ಕಾಯಕ ಇಲ್ಲ ಎನ್ನುವ ಗಾದೆ ಮಾತಿನಂತೆ ಭಕ್ತ ಕುಂಬಾರ ಅವರು ಕೇವಲ ನಿರೂಪಣೆಗೆ ಅಷ್ಟೇ ಸಿಮಿತ ಆಗದೆ ಜನಪದ ಕಲೆ, ಸಾಹಿತ್ಯ, ಸಂಸ್ಕøತಿಯ ಸಿರಿಯನ್ನು ಕೇವಲ ಕರ್ನಾಟಕ ರಾಜ್ಯ ಅಷ್ಟೇ ಅಲ್ಲದೆ ನೇರೆ ರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು ಅಲ್ಲದೆ ಅನೇಕ ಹೊರ ರಾಜ್ಯಗಳಲ್ಲಿ ಇವರು ಕನ್ನಡದ ತೇರನ್ನು ಎಳೆಯುದರ ಮೂಲಕ ಕನ್ನಡದ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.
ಇವರ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳನ್ನು ಗುರುತಿಸಿ ಅಮೇರಿಕ ದೇಶದ ಏಶಿಯಾ ಕಲ್ಚರಲ್ ಸಂಶೋಧನಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದೆ. ಭಕ್ತಕುಂಬಾರ ಅವರಿಗೆ ಗೌರವ ಡಾಕ್ಟರೇಟ್ ಪದವಿ ಲಭಿಸಿದಕ್ಕೆ ಕಲ್ಯಾಣ ಕರ್ನಾಟಕದÀ ಅನೇಕ ಪೂಜ್ಯರು ನಾಡಿನ ಗಣ್ಯ ಮಾನ್ಯ ವ್ಯಕ್ತಿಗಳು ಕವಿ ಕಲಾವಿದರು ಶುಭ ಕೋರಿದ್ದಾರೆ