ಭಕ್ತ ಕನದಾಸರ ಮೂರ್ತಿ ಪ್ರತಿಷ್ಟಾಪನೆ

ವಿಜಯಪುರ, ಜ.12-ವಿಜಯಪುರ ಜಿಲ್ಲಾ ಕುರುಬ ಸಂಘ ಹಾಗೂ ವಿಜಯಪುರ ನಗರ ಘಟಕ ಕುರುಬರ ಸಂಘ ವತಿಯಿಂದ ಐತಿಹಾಸಿಕ ವಿಜಯಪುರ ನಗರದ ಸ್ಟೇಷನ್ ರಸ್ತೆ, ಜಿಲ್ಲಾ ಕ್ರೀಡಾಂತಗಣ ಕ್ರಾಸ್ ರೋಡದಲ್ಲಿ ಪ್ರಥಮ ಬಾರಿಗೆ ಬಹುದಿನದ ಬೇಡಿಕೆ ನಗರದ ಘಟಕದ ವತಿಯಿಂದ ಈಡೇರಿದೆ. ಶ್ರೀ ಭಕ್ತಕನಕದಾಸ ಮೂರ್ತಿ ಪ್ರತಿಷ್ಠಾಪನೆ ಮತ್ತು ಸಮಾಜದಿಂದ ಶ್ರೀ ಸಿದ್ದಯೋಗಿ ಅಮರೇಶ್ವರ ಮಹಾರಾಜರು, ಕವಲಗುಡ್ಡ ಮತ್ತು ಮಾಳಿಂಗರಾಯ ಮಹಾರಾಜರು ನಾಗಠಾಣ, ಯಂಭತ್ನಾಳ ಪೂಜಾರಿಗಳು, ಹಾಗೂ ಚಿದಾನಂದ ಪೂಜಾರಿ ಇವರ ಅಮೃತ ಹಸ್ತದಿಂದ ನೆರವೇರಿಸಿದರು.
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ಮಲ್ಲಣ್ಣ ಶಿರಶ್ಯಾಡ, ಜಿಲ್ಲಾ ಸಮಾಜ ಸೇವಕ ಶ್ರೀಕಾಂತ ಸಂಗೋಗಿ,ನಗರ ಘಟಕ ಅಧ್ಯಕ್ಷರಾದ ಕಗ್ಗೋಡ, ಉಪ ಅದ್ಯಕ್ಷರಾದ ಮಹಾಂತೇಶ ಬೇವೂರ, ಖಜಾಂಚಿ, ಸುರೆಶ ಡೊಂಬಾಳೆ, ಪ್ರಧಾನ ಕಾರ್ಯದರ್ಶಿ ರಮೇಶ ಕಾಲೇಬಾಗ, ಕೊಂಡಿಬಾ ಕೊಳೇಕರ, ಶಿವಾಜಿ ಗಾಡವೆ, ಧೂಳು ಬರಕಾಡೆ, ಚಂದ್ರಶೇಖರ ನಾಗರಾಳ, ಬೀರಪ್ಪ ಜುಮನಾಳ, ಪ್ರದೀ ಕಲ್ಲೊಳ್ಳಿ, ಬಸವರಾಜ ಕಾಳೆ, ಪರಶುರಾಮ ತರಲಗಟ್ಟಿ, ಪ್ರವೀಣ ಮನ್ನಿಕೇರಿ, ಮತ್ತು ಹಲವಾರು ಸಮಾಜದ ಮುಖಂಡರುಗಳು ಭಾವಹಿಸಿದ್ದರು ಎಂದು ತಾಲುಕಾ ಯುವ ಘಟಕದ ಅಧ್ಯಕ್ಷರಾದ ರಾಜು ಭಿಸೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.