ಭಕ್ತ ಕನಕದಾಸ, ಒನಕೆ ಓಬವ್ವ, ಮೌಲಾನಾ ಅಬುಲ್ ಕಲಾಂ ಆಜಾದ್ ಜಯಂತಿ ಆಚರಣೆ

ಕಲಬುರಗಿ:ನ.11: ನಗರದ ಸಮೀಪವಿರುವ ಝಾಪೂರ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರÀವಾರ ಭಕ್ತ ಕನಕದಾಸ, ಒನಕೆ ಓಬವ್ವ, ಮೌಲಾನಾ ಅಬುಲ್ ಕಲಾಂ ಆಜಾದ್ ಜಯಂತಿ ಆಚರಣೆ ಜರುಗಿತು.
ಮೂವರು ಮಹನೀಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಉಪನ್ಯಾಸಕ ಎಚ್.ಬಿ.ಪಾಟೀಲ, ಸಮ-ಸಮಾಜ ನಿರ್ಮಾಣಕ್ಕೆ ಕನಕದಾಸರ ಕೊಡುಗೆ ಅಮೋಘವಾಗಿದೆ. ಅವರ ತತ್ವ ಸಮಾಜಕ್ಕೆ ಅಗತ್ಯವಾಗಿದೆ. ಹೈದರಲಿ ಸೈನ್ಯದ ವಿರುದ್ಧ ಹೋರಾಡಿ, ನಮ್ಮ ನಾಡಿನ ಸಂರಕ್ಷಣೆ ಮಾಡಿದ್ದಾರೆ. ಮೌಲಾನಾ ಅಬುಲ್ ಕಲಾಂ ಆಜಾದ್ ದೇಶದ ಪ್ರಥಮ ಶಿಕ್ಷಣ ಸಚಿವರಾಗಿ ದೇಶಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಶಾಲೆಯ ಮುಖ್ಯ ಶಿಕ್ಷಕ ದೇವೇಂದ್ರಪ್ಪ ಗಣಮುಖಿ ಮಾತನಾಡಿ, ಮೂವರು ಮಹನೀಯರ ಕೊಡುಗೆ ವಿದ್ಯಾರ್ಥಿಗಳು ಅಳವಡಿಸಿಕೊಂಡು ದೇಶ ಸೇವೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ ಮಾಂಗ್, ಗ್ರಾ.ಪಂ.ಸದಸ್ಯರಾದ ಪೀರಪ್ಪ ದೊಡ್ಡಮನಿ, ಮಲ್ಲಮ್ಮ ಪೂಜಾರಿ, ಶಿಕ್ಷಣಪ್ರೇಮಿ ನಾಗನಗೌಡ್ ಪಾಟೀಲ, ಪ್ರಮುಖರಾದ ಶರಣಪ್ಪ ಪೂಜಾರಿ, ಪರಮೇಶ್ವರ ಪೂಜಾರಿ, ಅಣ್ಣಾರಾಯ ಪೂಜಾರಿ, ನಾಗರಾಜ ನಾಟಿಕಾರ, ಜೈಭೀಮ ಸರಡಗಿ, ಅರುಣಕುಮಾರ ಕಟ್ಟಿಮನಿ, ಹಣಮಂತ್ ನಾಯ್ಕೋಡಿ, ಸಾಯಬಣ್ನ ಹೊಸಮನಿ, ಭೀಮರಾಯ ನಾಟಿಕಾರ್, ಶಿವಯೋಗಿ ಹೊಸಮನಿ, ರಾಹುಲ್ ನಾಯ್ಕೋಡಿ, ಶಾಂತಾಬಾಯಿ ಹಿರೇಮಠ, ವೀರವ್ವ ಹಿರೆಕೆನ್ನೂರ್, ಲಕ್ಕುನಾಯಕ್, ಹಬೀಬಾ ಬೇಗಂ, ಹಣಮಂತ ಪೂಜಾರಿ, ದೇವೇಂದ್ರಪ್ಪ ಪೂಜಾರಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.