ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಠಾಪನೆಗೆ ಭೂಮಿಪೂಜೆ

ಹಗರಿಬೊಮ್ಮನಹಳ್ಳಿ .ನ.17 ತಾಲೂಕಿನ ಚಿಲುಗೋಡು.ಯಡ್ರಾಮನಹಳ್ಳಿ. ಹಗರಿ ಕ್ಯಾದಿಗಿಹಳ್ಳಿ. ಮೂರು ಗ್ರಾಮಗಳ ನಡುವೆ ಇರುವ ಹಗರಿ ಸರ್ಕಲ್ ನಲ್ಲಿ ಶ್ರೀ ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಠಾಪನೆಗೆ ಎಂದು ಭೂಮಿಪೂಜೆಯನ್ನು ನೆರವೇರಿಸಲಾಯಿತು
ಭೂಮಿ ಪೂಜೆ ನೆರವೇರಿಸಿದ ತಾಲೂಕು ಕುರುಬರ ಸಂಘದ ಅಧ್ಯಕ್ಷರಾದ ಬುಡ್ಡಿ ಬಸವರಾಜ್ ಮಾತನಾಡಿ.ಭಕ್ತ ಕನಕದಾಸರು ಕೇವಲ ಕುರುಬ ಜಾತಿಗೆ ಸೀಮಿತವಲ್ಲ ಮಾನವಕುಲಕ್ಕೆ ಅಪಾರವಾದಂತಹ ಕೊಡುಗೆಯನ್ನು ಕೊಟ್ಟಿದ್ದಾರೆ. ಶ್ರೀ ಭಕ್ತ ಕನಕದಾಸರ ಆದರ್ಶಗಳು ಮುಂದಿನ ಪೀಳಿಗೆಗೂ ದೊರೆಯುವಂತಾಗಬೇಕು ಎನ್ನುವ ನಿಟ್ಟಿನಲ್ಲಿ ಭಕ್ತ ಕನಕದಾಸರ ಮೂರ್ತಿವ್ಯಯಯನ್ನು ಸ್ಥಾಪಿಸುವುದರ ಮೂಲಕ ಜನರಲ್ಲಿ ಕನಕದಾಸರ ಆದರ್ಶಗಳನ್ನು ಬಿತ್ತುವ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುರುಬ ಸಮಾಜದ ಹಿರಿಯ ಮುಖಂಡರಾಗಿರುವ ಮುಟುಗನಹಳ್ಳಿ ಕೊಟ್ರೇಶ್. ಗೋಣಿಬಸಪ್ಪ. ಮಧುಸೂದನ್. ಕರಿಯಪ್ಪ. ಪಂಪಾಪತಿ .ಪರಶುರಾಮ್ .ರಾಮು. ಬಾಣದ ಹನುಮಂತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸೇನೆಯ ತಾಲೂಕು ಅಧ್ಯಕ್ಷ ಹೆಚ್ ಮಂಜುನಾಥ್ . ಕನಕ ಯುವಸೇನೆಯ ದೊಡ್ಡಬಸಪ್ಪ.ಚೆನ್ನಪ್ಪ. ಮಾರುತಿ. ಮೂರಗೇರಿ ರಾಮಣ್ಣ. ಉಪನ್ಯಾಸಕ ಗೂಳಪ್ಪ. ಶಿವಾನಂದಪ್ಪ.ಪರಶುರಾಮ್. ಇತರರು ಭಾಗವಹಿಸಿದ್ದರು