ಭಕ್ತಿ ಶ್ರದ್ಧೆಯಿಂದ ಸತ್ಯನಾರಾಯಣ ಸ್ವಾಮಿ ಜಯಂತೋತ್ಸವ

ಬಳ್ಳಾರಿ, ಮಾ.22: ನಗರದ ಸತ್ಯನಾರಾಯಣಪೇಟೆಯ ದೇವಸ್ಥಾನದಲ್ಲಿ ಸತ್ಯನಾರಾಯಣ ಸ್ವಾಮಿಯ 112 ನೇ ವರ್ಧಂತಿ ಜಯಂತೋತ್ಸವನ್ನು ಶ್ರದ್ದಾ ಭಕ್ತಿಯಿಂದ ನೆರವೇರಿಸಲಾಯಿತು.
ಶ್ರೀ ಲಕ್ಷ್ಮಿಸತ್ಯನಾರಾಯಣ ಸ್ವಾಮಿಗೆ ಪಂಚಾಮೃತ ಅಭಿಷೇಕ, ಧನವಂತ್ರಿ ಹೋಮ, ಪಲ್ಲಕಿ ಸೇವ, ಕನಕಾಭಿಷೇಕಂ, ಪೂಜೆಗಳನ್ನು ಪ್ರಧಾನ ಅರ್ಚಕ ಗುರುರಾಜಾಚಾರ್ಯ ನೆರವೇರಿಸಿದರು.
ಇದೇ ತಿಂಗಳ17 ರಿಂದ 22 ವರೆಗೂ ಪಂಡಿತ ಗೋಪಾಲಚಾರಿ ಅವರಿಂದ ಭಗವತಿ ಪುರಾಣ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಈ ಪೂಜಾ ಕಾರ್ಯಕ್ರಮದಲ್ಲಿ ಸತ್ಯನಾರಾಯಣ ಸ್ವಾಮಿ ದೇವಸ್ಥಾನ ಕಮಿಟಿ ಮ್ಯಾನೇಜರ್‌ ಟ್ರಸ್ಟಿ ಮುರಳಿ ಮೋಹನ್, ಟ್ರೆಜರಿ ವಾದಿರಾಜ್, ಸತ್ಯನಾರಾಯಣ ರಾವ್, ಶೇಷಗಿರಿ ಆಚಾರಿ, ಹನುಮೇಶ್, ಮತ್ತು ಹುಲಿಗಿ, ಟೀಕೆ ರವೀಂದ್ರನಾಥ್, ರಾಘವೇಂದ್ರ ಪ್ರಸಾದ್, ಪಾಂಡುರಂಗ ಆಚಾರಿ, ಎಚ್ ವೆಂಕಟೇಶ್, ಪ್ರಮುಖರಾದ ಕೆ. ಎಸ್. ಅಶೋಕ್ ಕುಮಾರ್ ಭಕ್ತಾದಿಗಳು ಭಾಗವಹಿಸಿದ್ದರು.