ಭಕ್ತಿ ಮಾರ್ಗದಿಂದ ಮುಕ್ತಿ ಪಡೆಯಲುಶರಣರ ಜೀವನ ದರ್ಶನ ಅರಿಯಬೇಕು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜ,28-  ಚರ್ಮ, ನಾಲಿಗೆ, ನೇತ್ರ, ಕರ್ಣ ಮೊದಲಾದ ಸುಖಗಳನ್ನು ಬಿಟ್ಟು ಆತ್ಮ ಶುದ್ದಿಯಿಂದ ಭಕ್ತಿಯಿಂದ  ಮುಕ್ತಿಯನ್ನು ಪಡೆಯುವ ಮಾರ್ಗದ ಕಡೆ ನಡೆಯಲು ಶಿವಶರಣ ಜೀವನ ದರ್ಶನ ಅರಿಯಬೇಕಿದೆಂದು ಶರಣಬಸವ ಅಪ್ಪಗಳು ಹೇಳಿದರು.
ಅವರು ನಗರದ ಕೊಟ್ಟೂರು ಸ್ವಾಮಿ ಕಲ್ಯಾಣ ಮಂಟಪದಲ್ಲಿ  ಡಾ.ಸಂಗನಬಸವ ಸ್ವಾಮಿಗಳ ದ್ವಿತೀಯ ಪುಣ್ಯ ಸ್ಮರಣೆ ಅಂಗವಾಗಿ ಹಮ್ಮಿಕೊಂಡಿರುವ  ಮಹಾತ್ಮರ ಜೀವನ ದರ್ಶನ ಪ್ರವಚನದಲ್ಲಿ ಕಾರ್ಯಕ್ರಮದಲ್ಲಿ ಪ್ರವಚನ ನೀಡುತ್ತಿದ್ದರು.
ನಾಡಿನ ಅನೇಕ ಶರಣ, ಶ್ರೀಗಳ ಜೀವನ, ಅವರು ಕೈಗೊಂಡ ಸಾಮಾಜಿಕ ಚಿಂತನೆ, ಭಕ್ತಿ ಮಾರ್ಗದಿಂದ ಸಮಾಜದ ಸುಧಾರಣೆ ಮೊದಲಾದವುಗಳ ಕುರಿತು ಉದಾಹರಣೆ ಸಮೇತ ವಿವರಿಸಿಸರು.
ಕೊಟ್ಟೂರು ಸಂಸ್ಥಾನ  ಮಠದ ಬಸವಲಿಂಗ ಶ್ರೀಗಳು ಸಾನಿಧ್ಯವಹಿಸಿ ಆಶಿರ್ವಚನ ನೀಡುತ್ತ,  ಮಠದ ಚರಿತ್ರೆ ಬಹಳ ಜನತೆಗೆ ತಿಳಿದಿಲ್ಲ. ಅದಕ್ಕಾಗಿ ಮಠದ ಚರಿತ್ರೆಯ ಪುಸ್ತಕ ಹೊರ ತಂದಿದೆ.  ತೆಗೆದುಕೊಂಡು ಓದಿ, ಪೂಜ್ಯರ ವಿಷಯಗಳನ್ನು ಪ್ರವಚನದಲ್ಲಿ ತಿಳಿಸುತ್ತಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತ ಸಮೂಹ ಬರಬೇಕು ಎಂದರು.
 ಸೋಮಸಮುದ್ರ ಮತ್ತು ಶ್ರೀಧರಗಡ್ಡೆಯ ಶಾಖಾ ಮಠಗಳ ಶ್ರೀಗಳು ಉಪಸ್ಥಿತರಿದ್ದರು.
ಪ್ರತಿದಿನ ಸಂಜೆ 7 ರಿಂದ 8.30 ರ ವರೆಗೆ ಪ್ರವಚನ ನಡೆಯುತ್ತಿದೆ. ಇಂದಿನ ದಿನಗಳಲ್ಲಿ ಪುರಾಣ ಪ್ರವಚನ ಕೇಳುವವರು ಯಾರು  ಎಂಬ  ಮಾತುಗಳ ಮಧ್ಯೆ ಈ ಪ್ರವಚನ ಕಾರ್ಯಕ್ರಮದಲ್ಲಿ ನೂರಾರು ಜನ  ಹೆಚ್ಚು ಮಹಿಳೆಯರು ಮತ್ತು ಪುರುಷರು ಭಾಗವಹಿಸಿದ್ದು ಗಮನ ಸೆಳೆಯಿತು. 
ನಾಡಿದ್ದು ಪ್ರವಚನ ಮುಕ್ತಾಯಗೊಳ್ಳಲಿದೆ. ಪ್ರವಚನದ  ನಂತರ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
ಮಠದ ಹಾಸ್ಟೆಲ್ ನಲ್ಲಿನ  ವಿದ್ಯಾರ್ಥಿಗಳು ಕೊರಳಲ್ಲಿ ಮಡಿಪಂಜೆ ಧರಿಸಿ  ಕುಳಿತಿದ್ದು ಬಿಟ್ಟರೆ. ಅವರಾರು ಪ್ರವಚನ ಕೇಳುವ ಮನಸ್ಸುಳ್ಳವರಾಗಿರಲಿಲ್ಲ.  ಕೈನಲ್ಲಿ ಮೊಬೈಲ್ ಹಿಡಿದು ಅದರಲ್ಲಿ ಮಗ್ನರಾಗಿದ್ದು ಕಂಡು ಬಂತು. ಎನಿತು ಕಾಲ ಕಲ್ಲು ನೀರೊಳಗಿದ್ದರೂ ನೆನೆದು ಮೃದುವಾಗಬಲ್ಲದೇ ಎಂಬಂತೆ ವಿದ್ಯಾರ್ಥಿಗಳ ವರ್ತೆನೆ ಕಂಡು ಬಂತು.