
ಆಳಂದ:ಎ.23: ಪವಿತ್ರ ಮಾಸ ರಂಜಾನ್ ಹಬ್ಬದ ಈದ್-ಉಲ್-ಫಿತ್ರ್ ಪ್ರಯುಕ್ತ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಶನಿವಾರ ಮುಸ್ಲಿಂ ಬಾಂಧವರು ಭಕ್ತಿ ಭಾವದ ಮಧ್ಯ ಎಲ್ಲಡೆ ರಂಜಾನ ಹಬ್ಬವನ್ನು ಆಚರಿಸಿ ಪರಸ್ಪರ ಶುಭಾಷಯ ಕೋರಿದರು.
ಒಂದು ತಿಂಗಳ ಕಾಲ ಉಪವಾಸ (ರೋಜಾ) ಕೈಗೊಂಡು ಶನಿವಾರ ಸಾಮೂಹಿಕ ಪ್ರಾರ್ಥನೆ ಮೂಲಕ ರೋಜಾ ಆಚರಣೆಗೆ ಸಂಪನ್ನಗೊಳಿಸಿದರು.
ಪಟ್ಟಣದ ಈದ್ಗಾ ಮೈದಾನದಲ್ಲಿ ಬೆಳಗಿನ ಜಾವ ಸಾವಿರಾರು ಸಂಖ್ಯೆಯಲ್ಲಿ ನೆರೆದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಕೈಗೊಂಡು ಪರಸ್ಪರ ಹಬ್ಬದ ಶುಭಾಷಯ ಕೋರಿಕೊಂಡರು. ಅಲ್ಲದೆ, ಪಟ್ಟಣದ ಮಸೀದಿಗಳಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಸಮಯದಲ್ಲಿ ವಿಶೇಷವಾಗಿ ಪ್ರಾರ್ಥನೆ ಕೈಗೊಂಡರು. ಎಲ್ಲಡೆ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡುವ ದೃಶ್ಯ ಕಂಡುಬಂತು. ಹೊಸ ಬಟ್ಟೆಯನ್ನು ತೊಟ್ಟು ಕುಟುಂಬ ಸದಸ್ಯರ ಮನೆಗೆ ಹೋಗಿ ಶುಭಾಶಯ ಹೇಳಿಕೊಂಡರು. ತಮ್ಮ ಮನೆಗಳಿಗೆ ಹಿಂದುಯೇತರ ಬಂಧು ಬಾಂಧವರನ್ನು ಕರೆಯಿಸಿ ಹಬ್ಬದ ವಿಶೇಷ ಸುರುಕಂಬಾ ಬೋಜನ ಬಡಿಸಿ ಸೌಹರ್ದ ಮೆರೆದರು.
ಅನೇಕರು ಸಾಮಾಜಿಕ ಜಾಲತಾಣದ ಮೂಲಕ ಶುಭಾಷಯ ಹೇಳಿಕೊಂಡರೆ, ರಾಜಕೀಯ ಹಾಗೂ ಸಾಮಾಜಿಕ ಮುಖಂಡರು ಪಟ್ಟಣದ ಪ್ರಮುಖ ಬಡಾವಣೆ ರಸ್ತೆಗಳಲ್ಲಿ ಮುಸ್ಲಿಂ ಪರಸ್ಪರ ಭೇಟಿ ಮಾಡಿ ಕೈ ಕುಲಕಿಸಿ ಶುಭ ಕೋರಿದ್ದು ಸಾಮಾನ್ಯವಾಗಿತ್ತು.