ಭಕ್ತಿ ಭಾವದೊಂದಿಗೆ ಜರುಗಿದ ಶ್ರೀಹನುಮಾನ ಮೂರ್ತಿ ಪ್ರತಿಷ್ಠಾಪನೆ

ತಾಳಿಕೋಟೆ:ಅ.30:ಪಟ್ಟಣದ ಹುಣಸಗಿ ರಸ್ತೆಯ ಹಳ್ಳದ ದಡದಲ್ಲಿ ಪುರಸಭಾ ಸದಸ್ಯ ಜೈಸಿಂಗ್ ಮೂಲಿಮನಿ ಅವರ ನೇತೃತ್ವದಲ್ಲಿ ಜೀರ್ಣೋದ್ದಾರಗೊಂಡ ಶ್ರೀ ಹನುಮಾನ ದೇವಸ್ಥಾನದಲ್ಲಿ ನೂತನ ಶ್ರೀ ಹನುಮಾನ ಮಹಾ ಮೂರ್ತಿಯ ಪ್ರತಿಷ್ಠಾಪನಾ ಕಾರ್ಯಕ್ರಮವು ಸೋಮವಾರರಂದು ಭಕ್ತಿಭಾವದೊಂದಿಗೆ ಜರುಗಿತು.

ಮೂರ್ತಿ ಪ್ರತಿಷ್ಠಾಪನಾ ಅಂಗವಾಗಿ ಬೆಳಿಗ್ಗೆ 8 ಗಂಟೆಯಿಂದ ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ವೇ.ಸಂತೋಷಬಟ್ ಜೋಶಿ, ವೇ.ಗುಂಡಬಟ್ ಜೋಶಿ, ಸಂಜೀವಾಚಾರ್ಯ ಗ್ರಾಂಪೊರೋಹಿತ, ಶ್ರೀಪಾದ ಜೋಶಿ, ಯಲಗೂರೇಶ ಜೋಶಿ, ರಾಘವೇಂದ್ರ ಉಡಪಿ, ವೇಂಕಟೇಶ ಗ್ರಾಂಪೊರೋಹಿತ, ರವಿ ಆಚಾರ್ಯ ಜೋಶಿ, ಕಾರ್ತಿಕ ಮಠ, ಅವರಿಂದ ವಿಶೇಷ ಪೂಜೆಗಳ ನಡೆದವಲ್ಲದೇ ಶ್ರೀ ಹನುಮಾನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ, ಮಹಾ ಮೂರ್ತಿ ಪ್ರತಿಷ್ಠಾಪನೆ, ನಂತರ ನವಗ್ರಹ ಪೂಜೆ, ಪವಾನ ಹೋಮ ಹವನ, ಪೂರ್ಣಾಹುತಿ, ಮಹಾ ಮಂಗಳಾರತಿ ಕಾರ್ಯಕ್ರಮಗಳು ಜರುಗಿದವು.

ಮಹಾ ಪೂಜಾ ಕಾರ್ಯಕ್ರಮವನ್ನು ಶ್ರೀಮತಿ ಪದ್ಮಾವತಿ ಗೋವಿಂದಸಿಂಗ್ ಮೂಲಿಮನಿ ದಂಪತಿಗಳು ನಡೆಸಿಕೊಟ್ಟರು.

ನಂತರ ಸಮಸ್ತ ಭಕ್ತಾಧಿಗಳಿಗೆ ನಮ್ಮ ಗೆಳೆಯರ ಬಳಗದ ವತಿಯಿಂದ ಮಹಾ ಪ್ರಸಾದ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಪಟ್ಟಣದ ಸಮಸ್ತ ಭಕ್ತ ವೃಂದದವರು ಭಾಗವಿಸಿ ಶ್ರೀ ಹನುಮನ ಕೃಪೆಗೆ ಪಾತ್ರರಾದರು.